ನೀರು ಪೋಲಾಗದಂತೆ ಕ್ರಮಕ್ಕೆ ಸೂಚನೆ

ಇಂಡಿ:ನ.22: ಕಾಲುವೆಗೆ ಈಗಾಗಲೆ ನೀರು ಹರಿಯುತ್ತಿದ್ದು ಕೆರೆಗಳು ಭರ್ತಿಯಾಗಿವೆ .ಕ್ಯಾನಲ್‍ನಲ್ಲಿನ ನೀರು ಸ್ಥಗೀತಗೊಂಡರೆ ಮುಂದೊಂದು ದಿನನೀರಿನ ಸಮಸ್ಯತಲೆದೂರುವ ಸಾಧ್ಯತೆ ಇದೆ, ಹೀಗಾಗಿ ಸಂಬಂದಿಸಿದ ಅಧಿಕಾರಿಗಳು ನೀರು ಸಂಗ್ರಹಣೆ ಮಾಡುವ ಮೂಲಕ ನೀರಿನ ಸಮಸ್ಯಯಾಗದಂತೆ ನೋಡಿಕೊಳ್ಳಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಮಿನಿ ವಿಧಾನಸೌಧಾ ಸಭಾಭವನದಲ್ಲಿ ಇಂದು ಸೋಮವಾರ ನಡೆದ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭೀಮಾನದಿಯ ಮಹಾರಾಷ್ಟ್ರ ಮತ್ತು ಕರ್ನಾಟಕ 4 ಬ್ಯಾರೇಜ್‍ಗಳಿದ್ದು ಅದರಲ್ಲಿ ನೀರು ಉಳಿಸಲು ಪ್ರಮಾಣಿಕ ಪ್ರಯತ್ನ ಪಡಲು ಹಾಗೂ ಬ್ಯಾರೇಜ್ ನಿಂದ ನೀರು ಪೋಲಾಗದ ಹಾಗೆ ಮುತುವರ್ಜಿ ವಹಿಸಿ ಎಂದು ತಿಳಿಸಿದರು. ಹೋರ್ತಿ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ನೀರಿನ ಸಮಸ್ಯ ಇದೆ ಜನ ,ಜಾನುವಾರಗಳಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮವಹಿಸಿ ಎಂದರು.

ಪುರಸಭೆ ವ್ಯಾಪ್ತಿಯಲ್ಲಿ ನಗರದ  ರಸ್ತೆಗಳು ಹಾಳಾಗಿವೆ ನಗರದ ಸೌದರ್ಯಕ್ಕಾಗಿ ಈ ಹಿಂದೆ ನಾನು ಅನೇಕ ಸುಧಾರಣೆಗಳನ್ನು ಮಾಡಿರುವೆ ಆದರೆ ಸ್ಥಳೀಯ ಪುರಸಭೆ ಕೂಡಾ ಇದಕ್ಕೆ ಸ್ಪಂದಿಸಬೇಕಾದ ಕರ್ತವ್ಯ ಇದೆ. ನಗರದಲ್ಲಿ ಕೆಲ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು ,ಒಟ್ಟಾರೆ ಇನ್ನೋಂದು ವಾರದೋಳಗೆ ನಗರ ಸ್ವಚ್ಛತೆಯಿಂದ ಕಂಗೋಳಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಲಕ್ಷ್ಮೀಶ ಇವರಿಗೆ ಸಭೆಯಲ್ಲಿ ಸೂಚಿಸಿದರು.

ನಂತರ ಕೆ.ಎಸ್ ಆರ್.ಟಿ.ಸಿ ವಿಷಯ ಪ್ರಸ್ತಾಪಿಸಿದ ಶಾಸಕರು ನಿಮ್ಮ ಸಂಸ್ಥೆ ಸಾರ್ವಜನಿಕ ಸೇವೆ ಮಾಡುವ ಸಂಸ್ಥೆ ಒಂದು ದೇಶದ ಅರ್ಥಿಕ ಅಭಿವೃದ್ದಿಗೆ ಸಾರಿಗೆ ಸಂಪರ್ಕ ಪ್ರಮುಖವಾಗಿದ್ದು ಇದನ್ನು ನಿಮ್ಮ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಗ್ರಾಮೀಣ ಭಾಗದ ಜನಸಮುದಾಯಕ್ಕೆ ,ಶಾಲಾ ,ಕಾಲೇಜುಗಳ ವಿಧ್ಯಾರ್ಥಿಗಳಿಗೆ ,ವ್ಯಾಪಾರಸ್ಥರಿಗೆ ಸಾರಿಗೆ ಸೌಲಭ್ಯ ನೀಡದೆ ತುಂಬಾ ತೊಂದರೆ ಮಾಡುತ್ತಿದ್ದೀರಿ. ಸಾರಿಗೆ ಬಸ್ ನಿಲ್ದಾಣ ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿದೆ ಗಬ್ಬು ವಾಸನೆ ಬರುತ್ತಿದೆ ಸಾರ್ವಜನಿಕರ ಪ್ರಯಾಣಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ ಕೂಡಲೆ ಎಚ್ಚೇತ್ತು ನಾಳೇಯಿಂದಲೆ ಸ್ವಚ್ಛಗೋಳಿಸಿ ಎಂದು ಅಧಿಕಾರಿಗೆ ತಾಕೀತು ಮಾಡಿದರು.

ವಾರ್ಷಿಕ ಮಳೆ ಎಷ್ಟು ? ರೈತರಿಗೆ ಬೇರೆ ಬೇರೆ ಬೆಳೆಗಳನ್ನು ಬೆಳೆಯಲು ಅಧಿಕಾರಿಗಳು ಉತೇಜನ ನೀಡಿದ್ದೀರಾ ? ಎಂದು ಶಾಸಕರು ಪ್ರಶ್ನಿಸಿದರು ಇದಕ್ಕೆ ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ ಮಾತನಾಡಿ ವಾಡಿಕೆಯಂತೆ 781 ಎಂ.ಎಂ ಮಳೆಯಾಗಿದೆ. ಅಗರಖೇಡ ,ಹೋರ್ತಿ

ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ಅಧಿಕಾರಿ ತಿಳಿಸಿದರು. ತಾಲೂಕಿನಾದ್ಯೆಂತ ಕ್ಷೇತ್ರೋತ್ಸವ ಮಾಡಲು ಅನೇಕ ಬಾರಿ ಸೂಚಿಸಿರುವೆ ಮಾಡಿರುವ ಬಗ್ಗೆ ಮಾಹಿತಿಕೇಳಿದರು.

ಕ್ರಿಮಿ ಕೀಟನಾಶಕ ಔಷಧಿಗಳು ಮಾರಾಟ ಮಾಡುವವರ ಬಗ್ಗೆ ಎಚ್ಚರಿಕೆ ವಹಿಸಿ ತಾಲೂಕಿನದ್ಯೆಂತ ಅಂತಹ ಅಕ್ರಮಗಳು ಕಂಡು ಬದರೆ ಕೇಸ್ ದಾಖಲಿಸಿ ರೈತರಿಗೆ ಮೋಸ ವಂಚನೆ ಮಾಡಿದರೆ ಯಾರೇ ಇರಲಿ ನಿರ್ಧಾಕ್ಷಿಣೆ ಕ್ರಮ ಕೈಗೋಳ್ಳಿ ಕ್ಷೇಮೆ ಬೇಡ ಖಡಕ್ಕಾಗಿ ಹೇಳಿದರು. ಈಗಾಗಲೆ 153 ಲೈಸನ್ಸ್ ಅಂಗಡಿಗಳು ಇದ್ದಿರುತ್ತವೆ ಎಂದು ಅಧಿಕಾರಿಗಳು ಶಾಸಕರಿಗೆ ತಿಳಿಸಿದಾಗ ನೋಡಿ ಬಿ.ಎಸ್.ಸಿ ಅಗ್ರೀ ಆದವರಿಗೆ ಲೈಸನ್ಸ್ ಕೋಡಲು ಸೂಚಿಸಿದ ಅವರು ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳಲು ರೈತರಿಗೆ ತಿಳಿಸಿ ಎಂದರು.

ತೋಟಗಾರಿಕೆ ಅಧಿಕಾರಿ ರೈತರ ಬಗ್ಗೆ ಕಾಳಜೀ ಇರಲಿ ರೈತರಿಗೆ ಬೆಳೆ ವೀಮೆ ಮಾಡಲು ತಿಳಿಸಲಾಗಿದೆಯೇ ? ತೋಟಗಾರಿಕೆ ಬೆಳೆಗಳ ಪರಸ್ಥಿತಿ ಸಾಕಷ್ಟು ಹದಗೆಟ್ಟಿದೆ ರೈತ ಬೆಳೆದ ದ್ರಾಕ್ಷಿ ಸಂಪೂರ್ಣ ಹಾಳಾಗಿದ್ದು ಸಮರ್ಪಕ ಪರಿಶೀಲನೆ ಮಾಡಿ ಹಾನಿಯಾದ ರೈತರ ಪರಿಹಾರ ಎಷ್ಟು ಪ್ರದೇಶ ಈ ಎಲ್ಲಾ ವರದಿ ಅಚಾರ್ತು ಆಗದಂತೆ ಸರಕಾರಕ್ಕೆ ಕೂಡಲೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು. ಲಿಂಬೆ ಬೆಳೆ ಚೆನ್ನಾಗಿದೆ ಧಾರಣಿ ಕೂಡಾ ಒಳ್ಳೇಯದಾಗಿ ಎಂದು ತೋಟಗಾರಿಕಾ ಅಧಿಕಾರಿ ಸಭೆಯಲ್ಲಿ ತಿಳಿಸಿದರು.

ರೈತರ ಬಹುಮುಖ್ಯ ಸಾಕಾಣಿಕೆಗಳಲ್ಲಿ ಪಶುಪಾಲನೆ ಆದ್ದರಿಂದ ಛಳಿಗಾಲ ಪ್ರಾರಂಭವಾಗಿದ್ದು ಜಾನುವಾರಗಳಿಗೆ ಬೇರೆ ಬೇರೆ ವಿಧದ ರೋಗಗಳು ಹರಡುವ ಸಾಧ್ಯತೆ ಇದೆ ಪಶು ವೈಧ್ಯಾಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದ ಶಾಸಕರು ತಾಲೂಕಾ ಸಾರ್ವಜನಿಕ ಆಸ್ಪತ್ರೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ವದಂತಿಗಳು ಕೇಳಿ ಬಂದಿವೆ. ನಗರ ಆಸ್ಪತ್ರೆಗಳನ್ನು ನೋಡಿಕೊಳ್ಳಲು ತಜ್ಞ ವೈದ್ಯರನ್ನು ನೇಮಿಸಲು ಸರಕಾರಕ್ಕೆ ಪತ್ರ ಬರೆಯಲು ಸೂಚಿಸಿದರು. ವೈದ್ಯರು ಬಡವರ ಸೇವೆ ಮಾಡಿ ಪುಣ್ಯಕಟ್ಟಿಕೊಳ್ಳಿ ಸ್ಲಂ ಏರೀಯಾದಲ್ಲಿ ಆಸ್ಪತ್ರೆ ಮಾಡಲು ಸೂಚಿಸಿದ್ದೇನೆ ಇನ್ನು ಮಾಡಿಲ್ಲ ಏಕೆ ಎಂದು ಶಾಸಕರು ಪ್ರಶ್ನಿಸಿದಾಗ ಕೇವಲ ಎರಡು ದಿನ ಗಡವು ನೀಡುವಂತೆ ವೈದ್ಯರು ಆಗ್ರಹಿಸಿದರು.ನಂತರ ಶಾಸಕರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಇಲಾಖಾವಾರು ಪ್ರಗತಿ ಪರಿಶೀಲನೆ ಮಾಡಿದರು.

ಜಿಲ್ಲಾ ಪಂಚಾಯತ ಉಪಕಾರ್ಯದರ್ಶೀ ವಿಜಯಕುಮಾರ ಅಜೂರ, ಡಿ.ವಾಯ್.ಎಸ್.ಪಿ ಚಂದ್ರಕಾಂತ ನಂದರಡ್ಡಿ, ತಹಶೀಲ್ದಾರ ನಾಗಯ್ಯಾ ಹಿರೇಮಠ, ತಾ.ಪಂ ಅಧಿಕಾರಿ ಸುನೀಲ ಮದ್ದಿನ,ಪಿ.ಆರ್.ಇ.ಡಿ ಅಧಿಕಾರಿ. ಎಸ್.ಎಸ್ ಮಿಂಚನಾಳ, ಎಸ್.ಆರ್ ರುದ್ರವಾಡಿ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು.