ತಾಳಿಕೋಟೆ:ಜು.6:ಜಮೀನಿನಲ್ಲಿ ನೀರು ತುಂಬಿದ ಭಾವಿಯ ಪಕ್ಕದಲ್ಲಿಯೇ ಕಟ್ಟಲಾಗಿದ್ದ ಎತ್ತಿಗೆ ಇನ್ನೊಂದು ಎತ್ತು ಬಂದು ಗುದ್ದಾಡುತ್ತಿದ್ದಾಗ(ಇರಿದಾಡುತ್ತಿದ್ದಾ) ಆಯ ತಪ್ಪಿ ಭಾವಿಯಲ್ಲಿ ಬಿದ್ದ ಎತ್ತನ್ನು ತಾಳಿಕೋಟೆ ಅಗ್ನಿ ಶಾಮಕ ಠಾಣಾ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಬುಧವಾರದಂದು ನಡೆದಿದೆ.
ಕಲ್ಲದೇವನಹಳ್ಳಿ ಗ್ರಾಮದ ರೈತ ವಿರೇಶ ದೇವೇಂದ್ರ ಗತ್ತರಗಿ ಎಂಬವರು ಎತ್ತನ್ನು ಜಮೀನಿನಲ್ಲಿಯ ಸೇದು ಭಾವಿಯ ಪಕ್ಕದಲ್ಲಿಯೇ ಕಟ್ಟಿ ಜಮೀನಿನಲ್ಲಿ ಬಿತ್ತನೆ ಕೆಲಸಕ್ಕೆ ಜಮೀನು ಹದಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾಗ ಮತ್ತೊಂದು ಎತ್ತು ಅಲ್ಲಿಗೆ ಬಂದು ಕಟ್ಟಿದ ಎತ್ತಿಗೆ ಗುದ್ದಲು ಆರಂಬಿಸಿದಾಗ ಇದನ್ನು ನೋಡಿದ ರೈತ ವೀರೇಶ ಹತ್ತಿರ ಬರುವಷ್ಟರಲ್ಲಿಯೇ ಭಾವಿಯ ಪಕ್ಕದಲ್ಲಿಯೇ ಕಟ್ಟಲಾದ ಎತ್ತು ಆಯಾ ತಪ್ಪಿ ನೀರು ತುಂಬಿದ ಭಾವಿಯಲ್ಲಿ ಬಿದ್ದಿದೆ ಇದನ್ನು ನೋಡಿದ ಕೂಡಲೇ ಹತ್ತಿರದ ಎಲ್ಲ ರೈತರನ್ನು ಕರೆದು ಎತ್ತನ್ನು ಹೊರತೆಗೆಯಲು ಪ್ರಯತ್ನ ನಡೆಸಿದರೂ ಪ್ರಯೋಜನೆಯಾಗದಿದ್ದಾಗ ತಾಳಿಕೋಟೆ ಅಗ್ನಿ ಶಾಮಕ ಠಾಣೆಗೆ ದೂರವಾಣಿ ಮೂಲಕ ತಿಳಿಸಿದಾಗ ಸಿಬ್ಬಂದಿಗಳು ಕಲ್ಲದೇವನಹಳ್ಳಿಗೆ ದಾವಿಸಿ ಭಾವಿಯಲ್ಲಿ ಇಳಿದು ಪೈಪು ಮತ್ತು ಹಗ್ಗದ ಸಹಾಯದ ಮೂಲಕ ಎತ್ತನ್ನು ಹೊರತೆಗೆಯುವದರೊಂದಿಗೆ ಸಾವಿನಂಚಿನಲ್ಲಿದ್ದ ಎತ್ತನ್ನು ರಕ್ಷಣೆ ಮಾಡಿದ್ದಾರೆ.
ಎತ್ತಿನ ರಕ್ಷಣೆ ಮಾಡಿದ ಅಗ್ನಿ ಶಾಮಕ ಠಾಣಾ ಸಿಬ್ಬಂದಿಯ ಕಾರ್ಯಕ್ಕೆ ಕಲ್ಲದೇವನಹಳ್ಳಿ ಗ್ರಾಮದ ರೈತಾಪಿ ಜನತೆ ಕಾರ್ಯವನ್ನು ಶ್ಲಾಘಿಸಿ ಪ್ರಶಂಸಿಸಿದ್ದಾರೆ.
ಎತ್ತಿನ ರಕ್ಷಣೆ ಕಾರ್ಯದಲ್ಲಿ ಅಗ್ನಿ ಶಾಮಕ ಠಾಣಾ ಸಹಾಯಕ ಅಧಿಕಾರಿ ಎಚ್.ಎಸ್.ಬುರಾನಗೋಳ, ಪಿ.ಐ.ಸಣ್ಣಕ್ಕಿ, ಜೆ.ಡಿ.ನಾಲತವಾಡ, ಸಿ.ಸಿ.ಅಂಬಳನೂರ, ಎಚ್.ಸಿ.ಕರಕಳ್ಳಿ, ಎಸ್.ಎಚ್.ನರಸಲಗಿ, ತೊಡಗಿದ್ದರು.