ನೀರು ಗೇಜ್ ನೀಡಲು ಶಾಸಕರು ಭರವಸೆ

ಮಾನ್ವಿ,ಜ.೧೧-ಕೆಳಭಾಗದ ರೈತರಿಗೆ ಕಾಲುವೆ ನೀರು ಬಾರದೇ ಇರುವುದ್ದರಿಂದ ಇಂದು ಕೆಳಭಾಗದ ರೈತರು ಶಾಸಕ ರಾಜಾ ವೆಂಕಟಪ್ಪ ನಾಯಕರನ್ನು ಭೇಟಿ ಮಾಡಿ ನಮಗೆ ನೀರು ಬರುತ್ತಿಲ್ಲ .
ಹೀಗಾಗಿ ನೀರು ತರಿಸುವಂತೆ ರೈತರು ಶಾಸಕರಲ್ಲಿ ಮನವಿ ಮಾಡಿಕೊಂಡಾಗ ತಕ್ಷಣ ಶಾಸಕರು ಸಿಒ ಮತ್ತು ಸಿರವಾರ ಭಾಗದ ಎಇಇ. ಹಾಗೂ ಎಸ್ ಪಿ ಇವರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ಕೆಳಭಾಗದ ರೈತರಿಗೆ ಬರಬೇಕಾದ ಕಾಲುವಗೆ ನೀರಿನ ಮಟ್ಟ ಸರಿದೂಗಿಸಿ ಕೆಳಭಾಗದ ರೈತರಿಗೆ ಅನ್ಯಾಯವಾಗದಂತೆ ನೀರು ಒದಗಿಸಬೇಕು.
ಒಂದು ವೇಳೆ ಒದಗಿಸದ್ದಿದ್ದರೆ ರೈತರು ಎರಡನೇ ಬೆಳೆ ಬೆಳೆಯಲು ಕಷ್ಟ ವಾಗುತ್ತದೆ. ಈಗಾಗಲೇ ಮಳೆಯ ಪ್ರಮಾಣ ಕಡಿಮೆಯಾಗಿರುವುದ್ದರಿಂದ ರೈತರು ತೀರ ಸಂಕಷ್ಟದಲ್ಲಿದ್ದಾರೆ ಜೊತೆಗೆ ರೈತರು ಎರಡನೇಯ ಬೆಳೆಯ ಮೇಲೆ ಅವಲಂಬಿತರಾಗಿದ್ದು ಕೂಡಲೇ ಕೆಳ ಭಾಗದ ರೈತರಿಗೆ ಅನ್ಯಾವಗದಂತೆ ನೀರು ಒದಗಿಸಲು ಅಧಿಕಾರಿಗಳಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ತಾಕೀತ್ತು ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಯುವ ಘಟಕ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಜೆಡಿಎಸ್ ವಕ್ತಾರ ನಾಗರಾಜ್ ಬೋಗವತಿ ಸೇರಿದಂತೆ ಕೆಳ ಭಾಗದ ರೈತರು ಇದ್ದರು.