ನೀರು ಇಲ್ಲದ ಊರು ಎಂಬ ಅಪಕೀರ್ತಿ ಹೋಗಲಾಡಿಸುವೆ

ಸಿರವಾರ,ಮಾ.೨೩- ೨ ಕೊಟ್ಟಿ ವೆಚ್ಚದಲ್ಲಿ ಪೈಪ್ ಲೈನ್ ಕಾಮಗಾರಿಯ ಮೂಲಕ ವರ್ಷ ಪೂರ್ತಿ ಕೆರೆಗೆ ನೀರು ತುಂಬಿಸಿ ನೀರು ಇಲ್ಲದ ಊರು ಎಂಬ ಅಪಕೀರ್ತಿಯನ್ನು ಹೊಗಲಾಡಿಸಿರುವೆ.
ದೇವರ ಮತ್ತು ನಿಮ್ಮ ಆಶೀರ್ವಾದ ಇದರೆ ಮುಂದೆ ಇನ್ನೂ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತೇನೆ ಎಂದು ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಹೇಳಿದರು. ತಾಲೂಕಿನ ಅತ್ತನೂರು ಗ್ರಾಮದಲ್ಲಿ ೨೦೨೧-೨೨ ನೇ ಸಾಲಿನ ಆರ್.ಡಬ್ಲ್ಯೂ.ಎಸ್.ಎಸ್. ಇಲಾಖೆಯ ಕೆಕೆಆರ್ ಡಿಬಿ ಅನುದಾನದಲ್ಲಿ ೨ ಕೊ.ವೆಚ್ಚದಲ್ಲಿ ಬಂಗಾರಪ್ಪ ಕೆರೆಯಿಂದ ಅತ್ತನೂರು ಗ್ರಾಮದ ಕೆರೆ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಅತ್ತನೂರಿನ ಹಿರಿಯ ಶ್ರೀಗಳು ದೂರ ದೃಷ್ಠಿಯಿಂದ ಜಮೀನು ದಾನ ನೀಡಿದರಿಂದ ಈ ಹಿಂದೆ ಕೆರೆ ನಿರ್ಮಾಣವಾಗಿತ್ತು.
ಆದರೆ ನಾಲೆಗೆ ಹರಿಸಿದಾಗ ನೀರು ತುಂಬಿಸಬೇಕಾಗಿತು. ಈ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡರೆ ವರ್ಷ ಪೂರ್ತಿ ನೀರು ಕೆರೆಯನ್ನು ತುಂಬಿಸಬಹುದು. ಇದರಿಂದ ನಿಮ್ಮ ಗ್ರಾಮ ನೀರು ಇಲ್ಲದ ಊರು ಎಂಬ ಅಪಕೀರ್ತಿ ಹೋಗುತ್ತದೆ. ಈ ಕಾರ್ಯಕ್ಕೆ ಕೆಲವರು ಅಡಿ ಪಡಿಸಿದರು ಒಳೇಯ ಕೆಲಸ ನಿಲುವುದಿಲ್ಲ ಎಂಬುದಕ್ಕೆ ಇದೆ ಸಾಕ್ಷಿಯಾಗಿದೆ.
ಈ ಗ್ರಾಮಕ್ಕೆ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿರುವೆ. ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಆಗದೆ ಇರುವ ಕಾಮಗಾರಿಯನ್ನು ಮಾಡಿರುವೆ. ಶಾಸಕ ಸ್ಥಾನ ಶಾಸ್ವತ ಅಲ್ಲ, ಅಧಿಕಾರದಲ್ಲಿ ಇದಾಗ ಮಾಡುವ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಶಾಸಕರಾದ ನಂತರ ೫ ವರ್ಷಗಳ ಕಾಲ ರೈತರಿಗೆ ಎರಡು ಬೆಳೆಗೆ ನೀರು ಒದಗಿಸಿಕೊಡುವ ಕೆಲಸ ಮಾಡಿರುವೆ.
ಯುವಕರು ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದಾರೆ. ಅದನ್ನು ಸಹ ನಿರ್ಮಿಸುವೆ. ದೇವರ ಮತ್ತು ನಿಮ್ಮ ಆಶೀರ್ವಾದ ಇದ್ದರೆ ಮತ್ತೆ ಶಾಸಕರಾಗಿ ಇನ್ನೂ ಅಭಿವೃದ್ದಿ ಕೆಲಸ ಮಾಡುವೆ ಎಂದರು. ಜಿ.ಪಂ ಮಾಜಿ ಸದಸ್ಯ ಹಾಗೂ ಜೆಡಿಎಸ್ ರಾಜ್ಯ ಉಪಾದ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು ಮಾತನಾಡಿ ಒಂದು ಬಾರಿ ಗ್ರಾ.ಪಂ ಸದಸ್ಯರಾದರೆ ನಾನು ಸದಸ್ಯ ಎಂದು ಜಂಬ ಕೊಚ್ಚಿಕೊಳುತ್ತಾರೆ.
ಆದರೆ ವೆಂಕಟಪ್ಪ ನಾಯಕರು ಶಾಸಕರಾದರು ಸರಳವಾಗಿದ್ದಾರೆ. ಯಾರೇ ಕರೆ ಮಾಡಿದರೂ ಅವರ ಆಲಿಸಿ ಪರಿಹರಿಸುತ್ತಾರೆ. ಗ್ರಾಮಕ್ಕೆ ಆಸ್ಪತ್ರೆ ಕಟ್ಟಡ, ಶಾಲೆಯ ತರಗತಿ ಕೊಠಡಿ, ಹೈ ಮಾಸ್ಟ್ ದೀಪ, ಬಸ್ ನಿಲ್ದಾಣ, ಸಿಸಿ ರಸ್ತೆ, ಪಶು ಆಸ್ಪತ್ರೆಯ ಕಟ್ಟಡ ರೈತರಿಗೆ ನೀರು ಒದಗಿಸಿದ್ದಾರೆ. ಸಿರವಾರ ಪಟ್ಟಣದಲ್ಲಿ ಅನೇಕ ವರ್ಷಗಳಿಂದ ಬೇಡಿಕೆ ಇದ ಬಸ್ ನಿಲ್ದಾಣವನ್ನು ನಿರ್ಮಿಸುತ್ತಿದ್ದಾರೆ ಇಂತವರು ಶಾಸಕರಾಗಬೇಕು. ಮತ್ತೆ ಆಶೀರ್ವಾದ ಮಾಡಿದರೆ ಮುಂದೆ ಜೆಡಿಎಸ್ ಸರ್ಕಾರ ಅದಿಕಾರಕ್ಕೆ ಬರುತ್ತದೆ ಸಚಿವರಾಗುತ್ತಾರೆ ಎಂದರು.
ಜೆಡಿಎಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಜಂಬುನಾಥ ಯಾದವ್ ಮಾತನಾಡಿದರು. ನಾಗರಾಜ ಭೋಗಾವತಿ, ಆದರ್ಶ ನಾಯಕ, ಪಂಪಾಪತಿ ನಾಯಕ, ವೀರಭದ್ರಯ್ಯ ಸ್ವಾಮಿ, ಜೆಮ್ಸರ ಅಲಿ, ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ ನಾಯಕ, ಸದಸ್ಯರಾದ ಬ್ರಹ್ಮಾಜಿ, ಮೃತ್ಯುಂಜಯ, ವಿರುಪಾಕ್ಷಿ, ಜೆಡಿಎಸ್ ಮುಖಂಡರಾದ ಸತ್ಯ ಬಾಬು, ಮಾರಪ್ಪ, ಈರಪ್ಪ ಜಗ್ಲಿ, ಮುತ್ತಣ್ಣ, ಕಬೀರ್, ಹನುಮಂತರಾಯ ನಾಯಕ್, ಆಲಂಪಾಷ, ಸಿಕ್ಕಿಂದ್ದಾರ್ ದೊಡ್ಮನಿ ವೆಂಕಟರಮಣ ಮಂಜುನಾಥ್ ನಾಯಕ್, ಬಸವರಾಜ ಗಚ್ಚಿನ ಮನೆ, ಅಲ್ಲಿ ಸಾಬ್, ಬಂದೇನವಾಜ್ಪಂ, ಪಾಪತಿ ಅಂಬರೀಷ್ ನಿಲಗಲ್, ಶಿವಪ್ಪ ಮಡಿವಾಳ, ಬಸಪ್ಪ ಊರಿನ ಸಮಸ್ತ ಹಿರಿಯರು ಭಾಗವಹಿಸಿದ್ದರು.