ನೀರು ಅಮೂಲ್ಯ ಸಂಪತ್ತು ಇದರ ಸಂರಕ್ಷಣೆ ಎಲ್ಲರ ಹೊಣೆ: ಡಾ.ಅಶೋಕ ಸಜ್ಜನ

?????????????????????????????????????????????????????????????????????????????????????????????????????????????????????????????????????????????????????????????????????????????????????????????????

ವಿಜಯಪುರ, ಮಾ.23-ಕೃಷಿ ತಂತ್ರಜ್ಞರ ಸಂಸ್ಥೆಯ ಸಹಯೋಗದೊಂದಿಗೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಜಲ 2021 ನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹ ಸಂಶೋಧನಾ ನಿರ್ದೇಶಕ ಡಾ.ಅಶೋಕ ಸಜ್ಜನ, ಜಲಕ್ಷಾಮ ಈ ಜಗತ್ತಿನ ಮುಂದೆ ಇರುವ ಬಿಕ್ಕಟ್ಟುಗಳಲ್ಲಿ ಅತ್ಯಂತ ಗಂಭೀರವಾದದ್ದು, ಅತಿಯಾದ ನೀರಿನ ಬಳಕೆಯಿಂದ ಫಲವತ್ತಾದ ಕೃಷಿ ಭೂಮಿ ಸವಳು-ಜವಳಾಗಿ ಬಂಜರು ನೆಲವಾಗುತ್ತಿದೆ. ಜೀವ ಜಲ ದುರುಪಯೋಗದ ದುಷ್ಪರಿಣಾಮ ರೈತರ ಜೀವನವನ್ನು ಸಂಕಷ್ಟಕ್ಕೆ ನೂಕಿದೆ ಎಂದು ಹೇಳಿದರು.
ರೈತರು ವೈಜ್ಞಾನಿಕವಾಗಿ ನೀರು ಬಳಕೆ ಹಾಗೂ ಸಾಂಪ್ರದಾಯಿಕ ಬೆಳೆಯನ್ನು ಬೆಳೆಯಬೇಕೆಂದರು. ಮುಖ್ಯ ಅತಿಥಿಗಳಾದ ಸಹ ವಿಸ್ತರಣಾ ನಿರ್ದೇಶಕ ಡಾ. ಆರ್. ಬಿ. ಬೆಳ್ಳಿ ಮಾತನಾಡುತ್ತಾ, ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರು ಕಾರ್ಯಪ್ರವೃತ್ತರಾಗಬೇಕಾಗಿದೆ. ನೀರಿನ ಸಮರ್ಪಕ ಬಳಕೆಯನ್ನು ಕೃಷಿಯಲ್ಲಿ ಅಳವಡಿಸಬೇಕು ಎಂದರು.
ಅನಾವಶ್ಯಕ ನೀರಿನ ಬಳಕೆಯನ್ನು ಕಡಿಮೆ ಮಾಡುವ ಮೂಲಕ ನೀರು ಮತ್ತು ನೈರ್ಮಲ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ನೀರಿನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಪುರಸಭೆಗಳ ಸಹಭಾಗಿತ್ವದಲ್ಲಿ ಕಾರ್ಯಯೋಜನೆ ಮಾಡಬೇಕಾಗಿದೆ. ವಿಶ್ವಜಲದಿನದಂದು ನಾವು ಒಗ್ಗೂಡಿ ಸಮರೋಪಾದಿಯಲ್ಲಿ ನೀರಿನ ಸಂಪನ್ಮೂಲವನ್ನು ಉಳಿಸಲು ಪಣ ತೂಡಬೇಕಾಗಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ನೀರಿನ ಅಭಾವ ಎಷ್ಟಾಗುತ್ತದೆ ಎಂದರೆ ಅದಕ್ಕಾಗಿ ಮೂರನೆ ಮಹಾಯುದ್ಧದಂತೆ ಆಗುತ್ತದೆ ಅದಕ್ಕಾಗಿ ಅಮೂಲ್ಯವಾದ ನೀರಿನ ಸಂರಕ್ಷಣೆಯತ್ತ ಹಾಗೂ ಬಳಕೆಯತ್ತ ಎಲ್ಲರೂ ಗಮನ ಹರಿಸಬೇಕಾಗಿದೆ ಎಂದರು.
ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥೆ ಡಾ. ಶುಭಾ ಎಸ್ ಹಾಗೂ ವಿಜ್ಞಾನಿಗಳಾದ ಡಾ. ಪ್ರೇಮಾ ಪಾಟೀಲ್, ಉಪಸ್ಧಿತರಿದ್ದರು. ಡಾ. ಶಿವಲಿಂಗಪ್ಪ ಹೊಟಕರ ಸ್ವಾಗತಿಸಿದರು, ಬಿ.ಸಿ. ಕೊಲ್ಹಾರ ಕಾರ್ಯಕ್ರಮ ನಿರೂಪಿಸಿದರು.