ನೀರು ಅಮೂಲ್ಯ ವ್ಯರ್ಥವಾಗಿ ಪೊಲು ಮಾಡಬೇಡಿ: ಸತೀಶ ಭಾವಿ

ವಿಜಯಪುರ, ಮಾ.23-ಪ್ರತಿ ವರ್ಷ ಮಾರ್ಚ 22 ರಂದು ನಾವು ವಿಶ್ವ ಜಲ ದಿನ ಅಂತ ಆಚರಿಸುತ್ತೇವೆಯಲ್ಲದೇ ನಾವು ನೀರಿನ ಬೆಲೆಯನ್ನು ಯಾರೂ ಅರ್ಥ ಮಾಡಿಕೊಳ್ಳದೇ ನೀರನ್ನು ಆನಾವಶ್ಯಕವಾಗಿ ಬಳಕೆ ಮಾಡುತ್ತಿದ್ದೇವೆ ಎಂದು ನೀರು ಬೇಕು ಸಮೀತಿಯ ಅಧ್ಯಕ್ಷರಾದ ಸತೀಶ ವಿಶ್ವನಾಥ ಭಾವಿ ಹೇಳಿದರು.
ಎಷ್ಟೋ ಪ್ರದೇಶದಲ್ಲಿ ಜನರು ನೀರು ಸಿಗದೇ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ ಮುಂದೊಂದು ದಿನ ಜಾಗತೀಕ ಮಟ್ಟದಲ್ಲಿ ನೀರಿಗಾಗಿ ದೇಶ-ದೇಶಗಳೊಡನೆ ಯುದ್ಧ ಸಂಭವಸಿದರೇ ಅಚ್ಚರಿ ಪಡಬೇಕಿಲ್ಲ. ಆದ್ದರಿಂದ ಪ್ರತಿ ದಿನವು ನಾವು ವಿಶ್ವ ಜಲ ದಿನವನ್ನಾಗಿ ಆಚರಿಸಬೇಕು ಎಂದರು.
ಇಂದು ನಮ್ಮ ಸಮಿತಿಯು ನಗರದ ಹೊರ ವಲಯದಲ್ಲಿ ಇರುವ ಭೂತನಾಳ ಕೆರೆಗೆ ಭೇಟಿ ನೀಡಿ ಅಲ್ಲಿನ ನೀರಿನ ಸಂಗ್ರಹಣೆ ಬಗ್ಗೆ ವಿಚಾರಿಸಿದಾಗ ಅಲ್ಲಿ ಸಮರ್ಪಕವಾಗಿ ಶೇಖರಣೆ ಇದ್ದು ಹಾಗೂ ಕುಡಿಯುವ ನೀರಿನ ಸರಬರಾಜು ಬಗ್ಗೆ ಯಾವುದೇ ತರಹದ ಸಮಸ್ಯೆಯಿಲ್ಲ ಆದರೇ ನಾವು ನಳ ಬಂದಾಗ ಅರ್ಧ ನೀರು ನಾವು ರಸ್ತೆಗಳಲ್ಲಿ ಬಿಡುತ್ತೇವೆ ಇದರಿಂದ ಅನಾವಶ್ಯಕವಾಗಿ ನೀರನ್ನು ಹಾಳುಮಾಡುತ್ತಿದ್ದೇವೆ ಎಂದು ಹೇಳಿದರು.
ಹಾಗೂ ಇನ್ನು ಅನೇಕ ನೀರಿನ ಉಳಿತಾಯದ ಬಗ್ಗೆ ನಮ್ಮ ಸಮಿತಿಯು ಈ ದಿವಸ ಜಲ ಜಾಗೃತಿ ಬಗ್ಗೆ ಜನರಲ್ಲಿ ತಿಳಿಯಪಡಿಸಿದ್ದೇವೆ. ಹೋದ ತಿಂಗಳು ನಾವು ಕೊಲ್ಹಾರ ಪಂಪಹೌಸಿಗೆ ಭೇಟಿ ನೀಡಿದ್ದಾಗ ಅಲ್ಲಿ ನೀರಿನ ಲೆವೆಲ್ 514.28 ಇತ್ತು ಈ ದಿವಸ ವಿಚಾರಿಸಿದಾಗ 512.22 ಲೆವೆಲ್ ಇದೆ. ಇದರಿಂದ ದಿನ ದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾದಾಗ ಕೇವಲ ಸರಕಾರದ ಜವಾಬ್ದಾರಿಯಲ್ಲ ಅದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ದಿನ ಪ್ರಮಾಣ ಮಾಡಿ ಹನಿ ಹನಿ ನೀರನ್ನು ಉಳಿಸಿ ದೇಶವನ್ನು ಒಂದು ಸಮೃದ್ಧವಾಗಿ ಬೆಳೆಸೊಣ ಎಂದರು.
ನೀರು ಬೇಕು ಸಮಿತಿಯ ಉಪಾಧ್ಯಕ್ಷರಾದ ಈರಣ್ಣ ಅಳ್ಳಗಿ ಸದಸ್ಯರಾದ ಸಾಗರ ಮೊಗಲಿ, ಭಾವೇಶ ಪೋರವಾಲ ಇನ್ನಿತರರು ಈ ಜಲ ಜಾಗೃತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.