ನೀರಿನ ಹೊಂಡದಲ್ಲಿ ಮುಳುಗಿ ಮೂವರ ಸಾವು

ಸಿರುಗುಪ್ಪ ಮೇ 02: ತಾಲೂಕಿನ ಕೆ.ಸೂಗೂರು ಗ್ರಾಮದ ನೀರಿನ‌ ಹೊಂಡದಲ್ಲಿ ಮೂರು ಜನ ಬಿದ್ದು ಮೃತಪಟ್ಟಿರುವ ಘಟನೆ ಇಂದು ನಡೆದಿದೆ.

ಯೋಗೇಶ ಗೌಡ(35), ರಾಜಗೌಡ(40), ಸುರೇಶ ಗೌಡ(27ವರ್ಷ) ಎನ್ನುವವರು ನೀರಿನಲ್ಲಿ ಮುಳುಗಿದವರೆಂದು ಹೇಳಲಾಗುತ್ತಿದೆ.

ಮೃತ ದೇಹಗಳನ್ನು ಅಗ್ನಿಶಾಮಕ ದಳ ಮತ್ತು ಪೋಲಿಸ್ ರು ಪತ್ತೆ ಹಚ್ಚುವ ಕಾರ್ಯ ನಡೆಸಿದ್ದಾರೆಂದು ಸಿರುಗುಪ್ಪ ಠಾಣೆಯ ಪಿ.ಎಸ್.ಐ.ಕೆ.ರಂಗಯ್ಯ ಹೇಳಿಸದ್ದಾರೆ.
ಮೃತರು ಅಲ್ಲಿಗೆ ಯಾಕೆ ಹೋಗಿದ್ದರು ಎನ್ನುವ ವಿಷಯ ತಿಳಿದು ಬಂದಿಲ್ಲ.