ನೀರಿನ ಸಮಸ್ಯೆ ಪರಿಹಾರ ಯಾಕಾಪೂರ ಭರವಸೆ

ಕಾಳಗಿ. ಮಾ.31 : ತಾಲೂಕಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪೈಪ್ ಲೈನ್ ಕೆಟ್ಟು ಆರು ತಿಂಗಳಾದರೂ ಕಾಲೇಜಿನಲ್ಲಿ ನೀರಿನ ಸಮಸ್ಯೆ ನಿಗದಿದ್ದರಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ನೀರಿಗಾಗಿ ನಿತ್ಯ ಅಲೆದಾಡುವಂತಾಗಿದೆ.
ಕೂಡಲೇ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದಾಗಿ ಜಿಲ್ಲಾ ಪಂಚಾಯತ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಸಂಜೀವನ ಯಾಕಾಪೂರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರ ಜೊತೆ ಕರೆ ಮಾಡಿ ನೀರಿನ ಸಮಸ್ಯೆ ತಿಳಿದುಕೊಂಡು ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಕೂಡಲೇ ನೀರಿನ ಸೌಲಭ್ಯ ಒದಗಿಸುದಾಗಿ ಭರವಸೆ ನೀಡಿದರು.

  ಜೆಡಿಎಸ್ ಮುಖಂಡರಾದ ಅಂಜುಮ್ ಪರ್ವೀಜ್, ಜೈ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಪರಮೇಶ್ವರ ಕಟ್ಟಿಮನಿ, ಹಣಮಂತ ಡೊಣ್ಣೂರ, ಮಂಜುನಾಥ ಮಾಕಪನೊರ, ಬಾಬುರಾವ್ ಡೊಣ್ಣೂರ, ಗೌತಮ್, ಇಸ್ಮಾಯಿಲ್ ರುಸ್ತುಮ್ ಅನೇಕರಿದ್ದರು.