ನೀರಿನ ಸಮಸ್ಯೆ ಪರಿಹರಿಸದಿದ್ದರೆ ಹೋರಾಟ: ಎಚ್ಚರಿಕೆ

ಲಕ್ಷ್ಮೇಶ್ವರ,ಮೇ24: ಪಟ್ಟಣದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು 10 ರಿಂದ 12 ದಿನಕೊಮ್ಮೆ ನೀರು ಸರಬರಾಜಾಗುತ್ತಿದ್ದು ಇದರಿಂದಾಗಿ ರೈತಾಪಿ ವರ್ಗದ ಜನರಿಗೆ ತೀವ್ರ ತೊಂದರೆಯಾಗಿದ್ದು ನೀರಿನ ಸಮಸ್ಯೆಯನ್ನು 15 ದಿನಗಳೊಳಗಾಗಿ ಬಗೆಹರಿಸದಿದ್ದರೆ ಉಗ್ರ ಹೋರಾಟ ಮಾಡುವದಾಗಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಪಟ್ಟಣದಲ್ಲಿ ಮಂಗಳವಾರ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಲಕ್ಷ್ಮೇಶ್ವರ ಪಟ್ಟಣದ 5 ಬಣಗಳ ವ್ಯಾಪ್ತಿಯಲ್ಲಿ ಎಲ್ ಅಂಡ್ ಟಿ ಕಂಪನಿಯ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿತ್ತು ಆದರೆ ಕಳೆದ ನಾಲ್ಕು ವರ್ಷಗಳಿಂದ ಇದನ್ನು ಸ್ಥಗಿತಗೊಳಿಸಿರುವುದು ಅಧಿಕಾರಿಗಳಿಂದ ಮಾಹಿತಿ ದೊರೆತಿದೆ ಎಂದರು ಇದರಿಂದಾಗಿ ಪಟ್ಟಣದ ಜನರು ನೀರಿನ ಸಮಸ್ಯೆ ಎದುರಿಸಬೇಕಾಗಿದೆ ಎಂದರು.
ತಾವು ಶಾಸಕರಾಗಿದ್ದಾಗ ಇಟ್ಟಿಗೆ ಏತ ನೀರಾವರಿ ಗೆ 179 ಕೋಟಿ ಜಾಲವಾಡಗಿ ನೀರಾವರಿ ಯೋಜನೆ 140 ಕೋಟಿ ಅನುದಾನ ಬಿಡುಗಡೆಯಾಗಿದ್ದು ಶೇಕಡ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಈಗಿನ ಶಾಸಕ ಚಂದ್ರು ಲಮಾಣಿ ಅವರು ಚುನಾವಣಾ ಪೂರ್ವದಲ್ಲಿ ಭರವಸೆಗಳನ್ನು ನೀಡಿದ್ದು ಬಿ ಸ್ಕೀಮ್ ಯೋಜನೆಯಡಿ ಕಾಮಗಾರಿಗಳನ್ನು ಸರ್ಕಾರದಿಂದ ಮಂಜೂರಾತಿ ಪಡೆಯಲಿ ಎಂದು ಹೇಳಿದರಲ್ಲದೆ ನಿವೇಶನ ರಹಿತರಿಗೆ ವಸತಿ ಯೋಜನೆಯಡಿ ಹಂಚಿಕೆಗಾಗಿ ಲಕ್ಷ್ಮೇಶ್ವರ ಪಟ್ಟಣದಲ್ಲಿ 64 ಎಕರೆ ಮುಂಡರಗಿ ಪಟ್ಟಣದಲ್ಲಿ 24 ಎಕರೆ ಶಿರಹಟ್ಟಿ ಪಟ್ಟಣದಲ್ಲಿ 10 ಎಕರೆ ಜಮೀನು ಖರೀದಿ ಮಾಡಿದ್ದು ಇದುವರೆಗೂ ಬಡವರಿಗೆ ನಿವೇಶನ ನೀಡಲ ಎಂದು ಗಂಭೀರವಾಗಿ ಆರೋಪ ಮಾಡಿದರು.
ಕ್ಷೇತ್ರದಲ್ಲಿ ಇದುವರೆಗೆ 510 ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದ್ದು ಈಗಿನ ಶಾಸಕರು ಅದು ಸರಕಾರದಿಂದ ಮಂಜೂರಾತಿ ಪಡೆದು ಒಂದು ಸಾವಿರ ಚೆಕ್ ಡ್ಯಾಂ ನಿರ್ಮಾಣ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಮಹೇಶ್ ಹೊಗೆಸೊಪ್ಪಿನ ಮಾತನಾಡಿ ಪಟ್ಟಣದಲ್ಲಿ ಎಲ್ ಅಂಡ್ ಟಿ ಕಂಪನಿಯ ನೀರು ಸರಬರಾಜು ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದೆ ಎಂಬ ಮಾಹಿತಿ ಯಾವ ಸದಸ್ಯರ ಗಮನಕ್ಕೂ ಬಂದಿಲ್ಲ ಎಂದರು ಈಗ ರಾಮಕೃಷ್ಣ ದೊಡ್ಡಮನಿಯವರು ಕೈಗೊಳ್ಳುವ ಯಾವುದೇ ಹೋರಾಟಕ್ಕೂ ತಾವು ಕೈಜೋಡಿಸುವದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ವಿಜಿಪಡಿಗೇರಿ ಶರಣು ಗೂಡಿ ಮಂಜುನಾಥ್ ಮಾಗಡಿ ನಾಗರಾಜ ಚಿಂಚಲಿ ಮಹದೇವಪ್ಪ ಅಂದಲಗಿ ಪೂರ್ಣಾಜಿ ಕರಾಟೆ ಶಿರಾಜ್ ಡಾಲಾಯತ್ತ್ ಮಂಜಪ್ಪ ಶರಶೂರಿ ಇದ್ದರು.