ನೀರಿನ ಸಮಸ್ಯೆ ನಿವಾರಣೆಗೆ ಬೋರು ಕೊರೆಸಿದ ಗೋವಿಂದರಾಜುಲು

ಬಳ್ಳಾರಿ, ಮೇ.03: ಇಲ್ಲಿನ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ 25 ನೇ ವಾರ್ಡಿನ ಕಾಪೊರೇಟರ್ ಗೋವಿಂದರಾಜುಲು. ವಾರ್ಡಿನ ಜನ ಎದುರಿಸುತ್ತಿರುವ ನೀರಿನ ಸಮಸ್ಯೆ ನಿವಾರಣೆಗೆಂದು ಎರೆಡು ಕಡೆಗಳಲ್ಲಿ ಬೋರ್ ಕೊರೆಸಿ ನೀರು ನೀಡಲು ಮುಂದಾಗಿದ್ದಾರೆ.
ವಾರ್ಡಿನ ಗಂಡಗ್ ಸ್ಟ್ರೀಟ್ ಮತ್ತು ಕೆಈಬಿ ಕಚೇರಿ ಹತ್ತಿರ ಇಂದು ಬೋರ್‍ಗಳನ್ನು ಕೊರೆಸಲಾಯಿತು. ಈ ಸಂದರ್ಭದಲ್ಲಿ ರೇಡಿಯೋ ಪಾರ್ಕ್ ಜಾನಿ, ರಾಜೇಶ್, ಅರವಿಂದ, ನವೀನ್ ಸತೀಶ್, ಪವನ್ ಮೊದಲಾದವರು ಇದ್ದರು.
ಕೊರೆಸುವ ಬೋರ್‍ಗೆ ಪಂಪ್ ಅಳವಡಿಸಿ ಮಿನಿ ವಾಟರ್ ಟ್ಯಾಂಕ್ ನಿರ್ಮಾಣ ಮಾಡಿ ಅದಕ್ಕೆ ಸಂಪರ್ಕ ಕಲ್ಪಿಸಿ ಜನತೆಗ ನೀರಿನ ಬಳಕೆಗೆ ಅನುಮೂಲ ಮಾಡಿಕೊಡಲಿದೆಂದು ಗೋವಿಂದ ರಾಜುಲು ಹೇಳಿದ್ದಾರೆ.
ಕಾರ್ಪೊರೇಟರ್ ಆದವರು ಇಂತಹ ಕೆಲಸಗಳನ್ನು ಜನರ ಸಮಸ್ಯೆ ಅರಿತು ಮಾಡುವುದು ಸರಿ. ಆದರೆ ಈ ಕೆಲಸ ಸ್ವಂತಮಾಡುವ ಬದಲ. ಕಾಪೊರೇಷನ್‍ಕಡೆಯಿಂದಲೇ ಮಾಡಿಸುವಂತಾಗಬೇಕು.