ನೀರಿನ ಸಮಸ್ಯೆಗೆ ಸ್ಪಂದಿಸಿದ ಸೂರ್ಯಕಾಂತ ನಾಗಮಾರಪಳ್ಳಿ

ಬೀದರ್:ಮಾ.23:ನಗರದ ಮೌನೇಶ್ವರ ಮಂದಿರ ಬಳಿ ಬೋರ್‍ವೆಲ್ ಕೊರೆಸಿರುವ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಅಧ್ಯಕ್ಷ, ಬಿಜೆಪಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅವರು ಕಾಲೋನಿಯ ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿದ್ದಾರೆ.
ನೀರಿನ ಸಮಸ್ಯೆ ಇರುವ ವಿಷಯವನ್ನು ಬಡಾವಣೆ ನಿವಾಸಿಗಳು ಗಮನಕ್ಕೆ ತಂದಿದ್ದರು. ಶಾಶ್ವತ ಪರಿಹಾರ ಕಲ್ಪಿಸಿಕೊಡಲು ದೇವಸ್ಥಾನದ ಬಳಿ ಕೊಳವೆ ಬಾವಿ ಕೊರೆಯಿಸಲಾಗಿದೆ ಎಂದು ಸೂರ್ಯಕಾಂತ್ ನಾಗಮಾರಪಳ್ಳಿ ತಿಳಿಸಿದ್ದಾರೆ.
ಸೂರ್ಯಕಾಂತ್ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಮುಖರಾದ ಬಾಬುರಾವ್ ವಿಶ್ವಕರ್ಮ, ಶ್ರೀಧರ ಪಂಚಾಳ್, ಮಹೇಶ ಪಂಚಾಳ್, ವೈಜನಾಥ ಗುಮ್ಮ, ಸಂಜು ಮೈನಳ್ಳೆ, ಶಾಂತಕುಮಾರ ಬೇಲೂರೆ, ಕಾಶಿನಾಥ ವಿಶ್ವಕರ್ಮ, ಶೈಲೇಶ್(ಪಿಂಟು) ತಡಕಲ್ , ನಾರಾಯಣ ಕೋಡಗಾವೆ ಮುಂತಾದವರು ಉಪಸ್ಥಿತರಿದ್ದರು.