ನೀರಿನ ಸಂರಕ್ಷಣೆ ಎಲ್ಲರ ಜವಾಬ್ದಾರಿ: ಸುಷ್ಮಾ


ಗುಳೇದಗುಡ್ಡ,ಮ.26: ನೀರು ಮನುಷ್ಯನಿಗೆ ಹಾಗೂ ಪ್ರಾಣಿಗಳಿಗೆ ಅವಶ್ಯವಾದ ಜೀವಜಲವಾಗಿದೆ. ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಸಬೇಕು. ನೀರು ಪೋಲಾಗದಂತೆ ಸಂರಕ್ಷಿಸಿ ಜೀವ ಸಂಕುಲಕ್ಕೆ ನೀರು ಒದಗಿಸುವ ಮಾನವೀಯ ಮೌಲ್ಯ ಎಲ್ಲರಲ್ಲೂ ಅವಶ್ಯಕವಾಗಿದೆ ಎಂದು ಜಿಲ್ಲಾ ಜೆ.ಎಂ.ಎಫ್.ಸಿ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶೆ ಸುಷ್ಮಾ ಟಿ.ಸಿ. ಹೇಳಿದರು.
ಅವರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕ ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಆಶ್ರಯದಲ್ಲಿ ನಡೆದ “ವಿಶ್ವಜಲ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಕಾಡುಗಳ ನಾಶದಿಂದಾಗಿ ನೀರಿನ ಅಂತರ್ಜಲಮಟ್ಟ ಕುಸಿಯುತ್ತಿದೆ. ನೀರು ಜೀವ ಸಂಕುಲಕ್ಕೆ ಅಮೂಲ್ಯ ನೈಸರ್ಗಿಕ ಸಂಪತ್ತಾಗಿದ್ದು. ಪ್ರತಿಯೊಬ್ಬರು ಮಳೆ ನೀರನ್ನು ಸಂಗ್ರಹಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲು ನಾವೆಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ವಕೀಲರಾದ ಪುಂಡಲೀಕ ಆರ್. ಬಡಿಗೇರ, ಪ್ರಭಾರಿ ಉಪಪ್ರಾಚಾರ್ಯ ಸಿ.ಎಂ. ಕುರುಬರ ಅವರು ಜಲ ಸಂರಕ್ಷಣೆ ಕುರಿತು ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಜಿ.ಎಸ್. ರಾಂಪೂರ, ಉಪಾಧ್ಯಕ್ಷ ಎಸ್.ಎಸ್. ಅಂಗಡಿ, ಎಚ್.ಆರ್. ಪಾಟೀಲ, ಶಕೀಲ ಕಾಟ್ರ್ಯಾಕ್ಟರ್, ವೈ.ಜಿ. ತಳವಾರ, ಸಂತೋಷ ಎಸ್. ಪಟ್ಟಣಶೆಟ್ಟಿ, ಟಿ.ಎಸ್. ಬೆನಕಟ್ಟಿ, ಚಂದ್ರಶೇಖರ ಬೆಕಿನಾಳ, ಜಿ.ಬಿ. ತೋಳಮಟ್ಟಿ, ಲತಾ ಎಸ್. ಪತ್ತಾರ, ಎಸ್.ಎಂ. ದೇಸಗರ, ಶಾರದಾ ಎಸ್. ಚಳ್ಳಗಿಡದ, ಲಕ್ಷ್ಮೀ ಎಲ್. ಅಂಗಡಿ, ಎಸ್.ಎಸ್. ಬಿರಾದರ, ಎಂ.ಎಂ. ಓಬಾಲೆ ಇತರರು ಇದ್ದರು.