ನೀರಿನ ರಭಸಕ್ಕೆ ಕೊಚ್ಚಿಹೋದ ಡಾಂಬರ್ ರಸ್ತೆ ಸಂಪರ್ಕ ಕಡಿತ

ಸೇಡಂ,ಜೂ,31: ಭಾರಿ ಮಳೆಯಿಂದಾಗಿ ನೀರಿನ ರಭಸಕ್ಕೆ ಕೊಚ್ಚಿಹೋದ ಡಾಂಬರ್ ರಸ್ತೆಯು ತಾಲೂಕಿನ ಇಟಕಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಲ್ಲಿಪುರ್ ತಾಂಡಾ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು. ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ, ಜನಸಾಮಾನ್ಯರು ದಿನದ ಚಟುವಟಿಕೇಗಳನ್ನು ಪೂರೈಸಲು ಸಂಪರ್ಕ ಕಡಿತ ಗೊಂಡಿರುವುದರಿಂದ ಕಷ್ಟವಾಗಿದೆ.
ಮೋತಕಪಲ್ಲಿ, ಸಕಲೇಶಪಲ್ಲಿ ಮದ್ಯದಲ್ಲಿರುವ ಅಲ್ಲಿಪುರ್ ತಾಂಡಾ ಗೆ ಜನರಿಗೆ ತಿರುಗಾಡಲು ಇರುವುದು ಇದೊಂದೇ ರಸ್ತೆ ಇದ್ದು ಈ ಮೊದಲು ಅರ್ಧ ಕೊಚ್ಚಿ ಹೋಗಿರುವ ರಸ್ತೆ, 2021 ರಿಂದ ಈ ರಸ್ತೆಯ ಪರಸ್ಥಿತಿ ಹೀಗೆ ಇದೆ,ಈ ತಾಂಡಾದ ಜನರು ಮತ್ತು ವಿದ್ಯಾರ್ಥಿಗಳು ಈಗ ಬಹಳಷ್ಟು ಕಷ್ಟ ಎದುರಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತಕಡೆ ಗಮನ ಹರಿಸಿ ಆದಷ್ಟು ಬೇಗನೆ ಸುಗಮ ಸಂಚಾರಕ್ಕೆ ರಸ್ತೆ ದುರಸ್ತಿ ಗೊಳಿಸಬೇಕಾಗಿ ಗ್ರಾಮದ ಮುಖಂಡರು ಯುವಕ ಕಿಶನ್ ರಾಠೋಡ್, ವಿದ್ಯಾರ್ಥಿಗಳು ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಅವರಿಗೆ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.