ನೀರಿನ ಮೌಲ್ಯವರ್ಧನೆ ಮೀನಿನಲ್ಲಿದೆ

ವಿಜಯಪುರ: ಮಾ.24:ನಗರದಕಂದಗಲ್ ಹನುಮಂತರಾಯರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 2ನೇ ಗೋಷ್ಠಿ ಕೃಷಿ ಕುರಿತಾಗಿ ಜರುಗಿತು.

ಈ ಸಂದರ್ಭದಲ್ಲಿ”ಕೃಷಿಯಲ್ಲಿ ಮತ್ಸ್ಯಕ್ರಾಂತಿ” ಕುರಿತುಮೊದಲನೆ ಉಪನ್ಯಾಸ ನೀಡಿ ಮಾತನಾಡಿದಉದಯವಾಣಿ ಪತ್ರಿಕೆಯಜಿಲ್ಲಾ ವರದಿಗಾರಜಿ.ಎಸ್‍ಕಮತರ ಮಾತನಾಡಿ, ನೀರಿನ ಮೌಲ್ಯವರ್ಧನೆ ಮೀನಿನಲ್ಲಿದೆ.ಪ್ರಸ್ತುತ ದಿನಮಾನದಲ್ಲಿ ನೀರಿನ ಸರಿಯಾದ ಸದ್ಭಳಕೆಯಾಗಬೇಕಿದೆ.ಮೀನುಗಾರಿಕೆ ಬೆಳೆಯಬೇಕಿದೆ.ಮತ್ತುಅದಕ್ಕಾಗಿಅಗತ್ಯವಿರುವಕೃತಕ ಪೂರಕಆಹಾರಘಟಕದ ಸ್ಥಾಪನೆಯಾಗಬೇಕಿದೆ.ಮತ್ಸ ಯೋಜನೆಗಳಿಗೆ ಸಂಬಂಧಪಟ್ಟಂತೆ ಸರಕಾರದ ನೆರವಿನ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸರಕಾರ ಚಿಂತಿಸಿ ಸರಿಯಾದ ಯೋಜನೆಗಳನ್ನು ರೂಪಿಸುವ ಅಗತ್ಯವಿದೆಎಂದು ಹೇಳಿದರು.

ಮೀನಿನಿಂದ ಸಾಕಷ್ಟು ಉದ್ಯೋಗ ಸೃಷ್ಠಿಯಾಗುವಕಾರಣದಿಂದ ಈ ಕುರಿತು ನಾವೆಲ್ಲರೂಚಿಂತಿಸಬೇಕಾಗಿದೆಎಂದರು.

ಎರಡನೆಉಪನ್ಯಾಸ ನೀಡಿದಎಸ್.ಟಿ. ಪಾಟೀಲ “ಸಾವಯವ ಮತ್ತು ಸಮಗ್ರ ಕೃಷಿ” ಕುರಿತುಮಾತನಾಡಿ, ಆಹಾರ ಸೇವಿಸುವ ಎಲ್ಲರಿಗೂ ಮಣ್ಣನ್ನುರಕ್ಷಿಸುವಜವಾಬ್ದಾರಿಇದೆಎಂದರು.

ನಾವು ಎಂದಿಗೂ ಭೂಮಿಗೆ ವಿಷ ನೀಡಬಾರದು.ರಾಸಾಯನಿಕ ವಸ್ತುಗಳನ್ನು ಬಳಿಸಿ ಮಣ್ಣಿನ ಫಲವತ್ತತೆಯನ್ನು ಹಾಳು ಮಾಡುತ್ತಿದ್ದೇವೆ. ಇದರಿಂದ ಮಣ್ಣಿನ ಶಕ್ತಿ ಕುಂದಿ ಹೋಗುತ್ತಿದೆ.ಇನ್ನಾದರೂ ನಾವೆಲ್ಲರೂ ಸಾವಯವ ಕೃಷಿ ಮಾಡುವ ಮೂಲಕ ನಮ್ಮಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಅಗತ್ಯತೆಇದೆ.ಸಾವಯವ ಬಳಸಿ ಮಣ್ಣನ್ನು ಉಳಿಸಬೇಕಾಗಿದೆ ಎಂದರು.

ಗೋಷ್ಠಿಯ ಸಾನಿಧ್ಯವನ್ನು ವಹಿಸಿದ್ದ ಆಲಗೂರಿನ ವೀರಶೈವ ಲಿಂಗಾಯತ್ ಪಂಚಮಸಾಲಿ ಪೀಠದ ಶ್ರೀ ಜಗದ್ಗುರುಡಾ.ಮಹಾದೇವ ಶಿವಾಚಾರ್ಯರು ಮಾತನಾಡಿ, ರೈತರು ಕೃಷಿಯಿಂದಜೀವನ ನಡೆಸುತ್ತಿದ್ದಾರೆ.ಇದರಿಂದರೈತರು ಕೃಷಿ ಭೂಮಿಯನ್ನುರಾಸಾಯನಿಕ ಮುಕ್ತ ಮಾಡಬೇಕಿದೆಎಂದರು.

ವೇದಿಕೆಯ ಮೇಲೆ. ಎಂ.ಸಿ.ಮುಲ್ಲಾ, ಡಾ. ಸಿದ್ದಣ್ಣ ಉತ್ನಾಳ, ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಶಿವಾನಂದ ಮಂಗಾನ್ನವರ್, ಎಸ್.ಬಿಚೌಧರಿ, ಡಾ. ಸಂಗಮೇಶ ಮೇತ್ರಿ, ಸಂಗೀತಾ ಮಠಪತಿ, ಅಮರೇಶ ಸಾಲಕ್ಕಿ ಉಪಸ್ಥಿತರಿದ್ದರು.