ನೀರಿನ ಮೇಲೆ ರಂಗೋಲಿ ಬಿಡಿಸಿ, ರಂಗೋಲಿ ಸ್ಪರ್ಧೆ ಉದ್ಘಾಟನೆ

ರಾಯಚೂರು,ಫೆ.೨೬- ನಗರದಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಜಾನಪದ ಮಹಿಳಾ ಸಮ್ಮೇಳನದ ಅಂಗವಾಗಿ ಇಂದು ವೀರಶೈವ ಕಲ್ಯಾಣ ಮಂಟಪದಲ್ಲಿ ನಿನ್ನೆ ಸಂಜೆ ಏರ್ಪಡಿಸಿದ ರಂಗೋಲಿ ಸ್ಪರ್ಧೆಯನ್ನು ನೀರಿನ ಮೇಲೆ ರಂಗೋಲಿಯನ್ನು ಬಿಡಿಸುವುದರ ಮೂಲಕ ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಭಾರತಿ ಮರವಂತೆ ಉದ್ಘಾಟಿಸಿದರು.
ಉಡುಪಿಯ ಜಿಲ್ಲೆಯ ಕುಂದಾಪುರದವರಾದ ಭಾರತಿ ಮರವಂತೆ ಅವರು ರಂಗೋಲಿಯಲ್ಲಿ ಪಿ ಎಚ್ ಡಿ ಪದವಿಯನ್ನು ಪಡೆದಿದ್ದಾರೆ. ಇವರು ೭೬ ನಿಮಿಷದಲ್ಲಿ ೭೬ ಭಾರತದ ರಾಷ್ಟ್ರಧ್ವಜಗಳನ್ನು ಬಿಡಿಸಿ ತಮಿಳುನಾಡಿನಲ್ಲಿ ವಿಶ್ವ ದಾಖಲೆಯನ್ನು ಮಾಡಿದ್ದಾರೆ.
ಸಮ್ಮೇಳನದ ಅಂಗವಾಗಿ ೫೦ಕ್ಕೂ ಹೆಚ್ಚು ವೈವಿಧ್ಯಮಯವಾಗಿ ಸ್ಥಳೀಯ ಮಹಿಳೆಯರು ಹಾಕಿದ ರಂಗೋಲಿ ಸ್ಪರ್ಧೆಯನ್ನು ವೀಕ್ಷಿಸಿ ರಾಯಚೂರಿನಲ್ಲಿ ಸುಂದರವಾದ ರಂಗೋಲಿ ಹಾಕುವ ಮಹಿಳೆಯರ ಉತ್ಸಾಹದ ಬಗ್ಗೆ ಪ್ರಶಂಶಿಸಿದರು.