ನೀರಿನ ಬವಣೆ ನೀಗಿಸಲು ಆಗ್ರಹ

ಕಲಬುರಗಿ:ಜೂ.4: ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕುಸನೂರು, ಕೃಷ್ಣಾ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಠ ಕುಸಿದಿದ್ದು, ನೀರಿನ ಬವಣೆ ಉಂಟಾಗುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಹೆಚ್. ಶಿವರಾಮೇಗೌಡರ ಕರವೇ ಜಿಲ್ಲಾಧ್ಯಕ್ಷ ಶರಣು ಹೊಸಮನಿ ಆಗ್ರಹಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಕುರಿತು ಶಾಸಕರು ಹಾಗೂ ಸಾರ್ವಜನಿಕರು ವಿಧಾನಸಭೆ ಚುನಾವಣೆಯಲ್ಲಿ ಗಮನ ಹರಿಸಿದ್ದರಿಂದಾಗಿ ಇದು ಶಾಸಕರ ಗಮನಕ್ಕೂ ಬಂದಿರಲಿಕ್ಕಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಶಾಸಕರ ವಿವೇಚನಾನಿಧಿಯಿಂದ ವಿಶೇಷ ಅನುದಾನ ಬಳಸಿ ಎರಡು ಬೋರವೆಲ್ ಹಾಕಿಸಿಕೊಟ್ಟಲ್ಲಿ ಇಲ್ಲಿನ ಜನತೆಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.