ನೀರಿನ ಪೈಪ್‌ಲೈನ್ ಕಾಮಗಾರಿಗೆ ಭೂಮಿ ಪೂಜೆ

ಮಾನ್ವಿ.ಡಿ.೦೯-ತಾಲೂಕಿನ ಅಮರೇಶ್ವರ ಕ್ಯಾಂಪಿನಲ್ಲಿ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಜಲ್‌ಜೀವನ್ ಮೀಷನ್ ವತಿಯಿಂದ ೫೭.೫ ಲಕ್ಷ ರೂಪಾಯಿಗಳ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕರಿಂದ ಭೂಮಿ ಪೂಜಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಜೆಡಿಎಸ್ ತಾಲೂಕಾ ಅಧ್ಯಕ್ಷ ಟಿ. ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಿಗಿ, ಮುಖಂಡರಾದ ರಾಜಾ ಆದರ್ಶ ನಾಯಕ, ನಾಗರಾಜ ಬೋಗವತಿ, ಜೆ ಹೆಚ್ ದೇವರಾಜ್, ರವಿಕುಮಾರ್ ಕೋನಾಪೂರು ಪೇಟೆ, ಮ್ಯಾಕಲ್ ಮೌನೇಶ ನಾಯಕ, ದತ್ತಾತ್ರೇಯ ವಕೀಲರು, ಬಸವರಾಜ ಕೇಸರಿ, ಅಮರೇಶಗೌಡ ಖರಬಾದಿನ್ನಿ, ತಿಮ್ಮನಗೌಡ ಮದ್ಲಾಪೂರು, ಜೆ.ಇ.ವೆಂಕಟೇಶ್ ಸೇರಿದಂತೆ ಗ್ರಾ.ಪಂ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು