ನೀರಿನ ತೊಟ್ಟಿಗೆ ಬಿದ್ದು ಬಾಲಕಿ ಸಾವು -ಶಾಸಕರಿಂದ ಕುಟುಂಬಕ್ಕೆ ಸಾಂತ್ವನ.

ಕೂಡ್ಲಿಗಿ. ನ.28 :- ಆಟವಾಡುತ್ತ ಪಕ್ಕದಲ್ಲಿದ್ದ ನೀರಿನ ತೊಟ್ಟಿಯಲ್ಲಿ ಬಿದ್ದು ಉಸಿರುಗಟ್ಟಿ  ವಿಸ್ಮಿತಾ (3) ಎಂಬ ಬಾಲಕಿ ಇಂದು ಚಿಕ್ಕಜೋಗಿಹಳ್ಳಿ ತಾಂಡಾದಲ್ಲಿ  ಮೃತಪಟ್ಟಿದ್ದು ವಿಷಯ ತಿಳಿದ ಶಾಸಕ ಡಾ ಶ್ರೀನಿವಾಸ ಮೃತಳ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿದ್ದಾರೆ.

ಚಿಕ್ಕ ಜೋಗಿಹಳ್ಳಿ ತಾಂಡದ  ಕಾವೇರಿ – ನಾಗರಾಜ    ದಂಪತಿ ಪುತ್ರಿ ಮೂರು ವರ್ಷದ ವಿಸ್ಮಿತಾ  ಎಂಬ ಬಾಲಕಿ ಆಟ ಆಡುವಾಗ ನೀರಿನ ತೊಟ್ಟಿಯಲ್ಲಿ ಬಿದ್ದು ಉಸಿರುಗಟ್ಟಿ  ಮೃತಪಟ್ಟಿರುತ್ತಾಳೆ. ಕ್ಷೇತ್ರದ ಗ್ರಾಮಗಳಿಗೆ ಭೇಟಿ ಹಾಗೂ ಶುದ್ಧಕುಡಿಯುವ ನೀರಿನ ಜಲ ಜೀವನ್ ಮಿಷನ್ ನ ನಳಸಂಪರ್ಕ ಯೋಜನಾ ಕಾಮಗಾರಿ ಭೂಮಿಪೂಜಾ ಕಾರ್ಯಕ್ರಮ ಹಾಗೂ ಜನರ ಅಹವಾಲು ಸ್ವೀಕರಿಸುವಲ್ಲಿ ಬ್ಯುಸಿ ಇರುವ ಶಾಸಕರು ಬಾಲಕಿ ಮೃತಪಟ್ಟ ವಿಷಯ ತಿಳಿದ ತಕ್ಷಣ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಭೇಟಿ ಮಾಡಿ  ನೊಂದ ಕುಟುಂಬಕ್ಕೆ ಸಾಂತ್ವನ ನೀಡಿ ವೈಯಕ್ತಿಕ ಆರ್ಥಿಕ ನೆರವು ನೀಡಿದ ಘಟನೆ ಇಂದು ಚಿಕ್ಕಜೋಗಿಹಳ್ಳಿ ತಾಂಡಾದಲ್ಲಿ ಜರುಗಿದೆ.