
ರಾಯಚೂರು, ಮೇ.೨೫- ನಗರದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಸೋರಿಕೆಯಾಗದಂತೆ ನಗರಸಭೆ ಅಧಿಕಾರಿಗಳ ಕ್ರಮವಹಿಸಬೇಕೆಂದು ಯೋಜನಾಧಿಕಾರಿ ಆಶಪ್ಪ ಪೂಜಾರಿ
ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರಿಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸರ್ಕಾರ ವಿವಿಧ ಅನುದಾನ ಮತ್ತು ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ನಗರದ ಬಹುತೇಕ ವಾರ್ಡ್ ಗಳಲ್ಲಿ ನೀರಿನ ಟ್ಯಾಂಕ್ ಸೋರಿಕೆ ಆಗದಂತೆ ಅಧಿಕಾರಿಗಳು ಮುಂಜಾಗ್ರತವಹಿಸಬೇಕೆಂದು ಸಲಹೆ ನೀಡಿದರು. ನಗರದ ಐಡಿಎಂಸಿ ಲೇಔಟ್, ಯರಮರಸ್, ಆಸ್ಕಿಹಾಳ, ಆಶಾಪುರ್ ಸೇರಿದಂತೆ ದುರಸ್ತಿ ಇರುವಜಿಎಸ್ ಎಲ್ ಆರ್,ಒಎಸ್ ಟಿ ಟ್ಯಾಂಕ್ ಹಾಗೂ ಆರ್ ಓ ಪ್ಲಾಂಟ್ ಗಳ ರಿಪೇರಿ ಮಾಡಿಸಿ ಜನರಿಗೆ ಶುದ್ಧ ಕುಡಿವ ನೀರು ಕಲ್ಪಿಸಬೇಕು ಎಂದು ಸೂಚಿಸಿದರು. ನಗರದಲ್ಲಿ ೧೪ ನೀರಿನ ಟ್ಯಾಂಕ್ ಸೋರಿಕೆಯಾಗದಂತೆ ಆಗದಂತೆ ನೋಡಿಕೊಳ್ಳಬೇಕು. ನಗರದ ಜನರ ನೀರಿನ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದರು.
ಆಸ್ಕಿಹಾಳ ಟಿಎಂಸಿಗೆ ಕೃಷ್ಣ ಅಥವಾ ತುಂಗಭದ್ರಾ ನಿಂದ ತಕ್ಷಣವೇ ನೀರು ಸರಬರಾಜು ಮಾಡಲು ಕ್ರಮ ಎಂದರು.
ನೀರಿನ ಟ್ಯಾಂಕ್ ಸೋರಿಕೆ ಆಗುತ್ತಿರುವ ಕಡೇ ಗುತ್ತೇದಾರರಿಂದ ತ್ವರಿತಗತಿಯಲ್ಲಿ ಕುಡಿಯುವ ನೀರು ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು. ವರ್ಷ ಕಳೆದಂತೆ ನಗರ ಬೆಳವಣಿಗೆ ಆಗುತ್ತಿದೆ ಇದರಿಂದ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸಮಸ್ಯೆ ಆಗದಂತೆ ಅಧಿಕಾರಿಗಳು ಗಮನಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಗುರುಲಿಂಗಪ್ಪ ನಗರಸಭೆ ಸಿಬ್ಬಂದಿಗಳು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಗಳು ಇದ್ದರು.