ನೀರಿನ ಟ್ಯಾಂಕಗೆ ಬಿದ್ದ ವನ್ಯ ಜೀವಿಯ ರಕ್ಷಣೆ

ಔರಾದ :ಆ.24: ತಾಲೂಕಿನ ಮದನೂರ ಗ್ರಾಮದ ನೀರಿನ ಓವರ್ ಹೆಡ್ ಟ್ಯಾಂಕಿನಲ್ಲಿ ಬಿದ್ದ ವನ್ಯ ಜೀವಿ (ಮರನಾಗಿ)ಯನ್ನು ಔರಾದ ಅಗ್ನಿಶಾಮಕ ಸಿಬ್ಬಂದಿಗಳು ಜೀವಂತವಾಗಿ ರಕ್ಷಣೆ ಮಾಡಿದ್ದಾರೆ.

ನೀರಿನ ಓವರ್ ಹೆಡ್ ಟ್ಯಾಂಕಗೆ ಬಿದ್ದ ಮರನಾಗಿ ಎಂಬ ವನ್ಯ ಜೀವಿಯನ್ನು ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ರಾಮಪ್ಪ ಹಾಗೂ ಸಿಬ್ಬಂದಿಗಳು ಸುಮಾರು ಎರಡು ಗಂಟೆ ಒಂಬತ್ತು ನಿಮಿಷಗಳ ಕಾಲ ಕಾರ್ಯಚರಣೆ ಮಾಡಿ ಜೀವಂತವಾಗಿ ರಕ್ಷಣೆ ಮಾಡಿದ್ದು, ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ಶಿವಾನಂದ, ಸುರೇಶ, ಫುಲೆಪ್ಪಾ, ಜಟಿಂಗರಾಯ, ಮಂಜುನಾಥ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮದಾಸ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.