
ಕಲಬುರಗಿ:ಎ.4: ಜಿಲ್ಲೆಯ ಕಮಲಾಪೂರ ತಾಲೂಕಿನ ಕಲಮುಡ ಗ್ರಾಮದ ನಾಮಾನಾಯಕ ತಾಂಡಾದಲ್ಲಿ ಎರಡು ವರ್ಷ ಕಳೆದರು ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿಯು ಅಪೂರ್ಣವಾಗಿದೆ.
ಇದರಿಂದಾಗಿ ಗ್ರಾಮಸ್ಥರ ಜೀವನ ದುಸ್ಥರವಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೇದಾರರಿಂದ ಸ್ಪಂದನೆ ಇಲ್ಲದಿರುವುದರಿಂದ ಇದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟಿಸಿ ದು:ಖ ವ್ಯಕ್ತಪಡಿಸಿ ನೀರಿಗಾಗಿ ಹೋರಾಡುತ್ತಿರುವ ಮಹಿಳೆಯರನ್ನು ಬೆಂಬಲಿಸಲು ಕಳಕಳಿಯಿಂದ ವಿನಂತಿಸಿರುತ್ತಾರೆ, ಹಾಗೂ ಕಾಮಗಾರಿಯನ್ನು ತಕ್ಷಣವೆ ಪೂರ್ಣಗೋಳಿಸುವಂತೆ ಬೇಡಿಕೆ ಇಟ್ಟಿದ್ದಾರೆ.