ನೀರಿನ ಅರವಟ್ಟಿಗೆಗೆ ಬಸವರಾಜ ನಕ್ಕುಂದಿ ಚಾಲನೆ

ಮಾನ್ವಿ.ಏ.೨೨-ಜನಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟಿಗೆಗೆ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ನಕ್ಕುಂದಿ ಚಾಲನೆ ನೀಡಿದರು.
ಮಾನ್ವಿ ತಾಲೂಕಿನ ಸಮೀಪದಲ್ಲಿ ಬರುವ ಪೋತ್ನಾಳ ಗ್ರಾಮದಲ್ಲಿ ಜನಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ) ನಕ್ಕುಂದಿ ವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟಿಗೆ ಚಾಲನೆ ನೀಡಿ ಮಾತನಾಡಿದ ಅವರು ದಿನೇ ದಿನೇ ಬೇಸಿಗೆ ಹೆಚ್ಚಾಗುತ್ತಿರುವುದರಿಂದ ನೀರಿನ ದಾಹ ಕೂಡ ಹೆಚ್ಚಾಗುತ್ತಿದೆ.
ಪೋತ್ನಾಳಿನ ಸುತ್ತಮುತ್ತಲು ಸುಮಾರು ನಲವತ್ತು ಹಳ್ಳಿಗಳ ಜನ ಸೇರುವ ಪೋತ್ನಾಳನಲ್ಲಿ ಶುದ್ಧ ಕುಡಿಯುವ ನೀರಿನ ಅರವಟಿಗೆ ಅವಶ್ಯವಾಗಿರುವುದರಿಂದ ಅರವಟ್ಟಿಗೆ ಪ್ರಾರಂಭಿಸಲಾಗಿದೆ.
ಸ್ಥಳೀಯ ಜನರು ಶುದ್ಧ ಕುಡಿಯುವ ನೀರನ್ನು ಪೋಲು ಮಾಡದಂತೆ ತಮಗೆ ಎಷ್ಟು ಬೇಕೋ ಅಷ್ಟು ನೀರು ಕುಡಿದು ದಾಹ ತೀರಿಸಿಕೊಳ್ಳಬೇಕು.
ಪೋತ್ನಾಳ ಭಾಗದ ಸುತ್ತಮುತ್ತಲಿನ ಜನರೆಲ್ಲರೂ ಗಿಡಗಳನ್ನು ಬೆಳೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಗುರು ಶರ್ಮಾ, ಎಚ್ ಶರಪುದ್ದೀನ್, ವಿರೂಪಾಕ್ಷಿ ಗೌಡ, ನವೀನ್ ನಾಡಗೌಡ, ಶರೀಫ್ ಸಾಬ್, ರಾಜು ತಾಳಿಕೋಟಿ, ಈರಣ್ಣಪೋತ್ನಾಳ, ಈಶ್ವರ ಮುದ್ದಂ ಗುಡ್ಡಿ, ಪರಶುರಾಮ್ ಬಾಗಲವಾಡ, ಪ್ರಸಾದ್ ಮದ್ಲಾಪುರ, ಏಸು ಅಮರೇಶ್ವರಕ್ಯಾಂಪ್, ಸಿದ್ದಪ್ಪ ಅಮರಾವತಿ, ಅಶೋಕ ತಡಕಲ್, ಪರಶುರಾಮ್ ಚೌಡ್ಕಿ, ಬೀರಪ್ಪ ಡೋಣಿ, ದೇವಪುತ್ರಪ್ಪ, ಶರಣಪ್ಪ, ವೀರೇಶ್ ಪನ್ನೂರ್, ಶರಣಬಸವ ಮುದ್ದಂ ಗುಡಿ, ಜಗದೀಶ್ ಪೋತ್ನಾಳ್ ಉಪಸ್ಥಿತರಿದ್ದರು.