ನೀರಿನ ಅರವಟ್ಟಿಗಾಗಿ ಎಂ. ಈರಣ್ಣ ಸ್ಥಳ ವೀಕ್ಷಣೆ

ಮಾನ್ವಿ,ಮಾ.೧೫- ಪಟ್ಟಣದ ಬಸ್ಸು ನಿಲ್ದಾಣ ಎಡಭಾಗದಲ್ಲಿ ಕುಡಿಯುವ ನೀರಿನ ಅರವಟ್ಟಿಗೆ ಅಳವಡಿಸುವ ಕಾರಣದಿಂದಾಗಿ ಗುತ್ತಿಗೆದಾರ ಎಂ. ಈರಣ್ಣ ಅವರು ಸ್ಥಳ ವೀಕ್ಷಣೆ ಮಾಡಿ ನಾಳೆ ಸಂಜೆಯೊಳಗೆ ಉಚಿತ ಶುದ್ದೀಕರಣ ನೀರಿನ ಘಟಕ ಸ್ಥಾಪಿಸಲಾಗುತ್ತದೆ ಎಂದರು.
ನಂತರ ಅನೀಲಕುಮಾರ್ ಮಾತಾನಾಡಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಪಟ್ಟಣದ ಬಸ್ಸು ನಿಲ್ದಾಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ, ಬೇಸಿಗೆಯಲ್ಲಿ ನೀರಿನ ದಾಹ ತಣಿಸುವುದಕ್ಕಾಗಿ ನಮ್ಮ ನಾಯಕರಾದ ಎಂ ಈರಣ್ಣನವರು ನೀರಿನ ಅರವಟ್ಟಿಗೆಯನ್ನು ಸ್ಥಾಪಿಸಲಾಗುತ್ತದೆ ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಪ್ರತಿ ವರ್ಷದಂತೆ ಈ ವರ್ಷವೂ ಮುಂದುವರೆಸಲಾಗುತ್ತದೆ ಇದಕ್ಕೆ ಸಂಬಂಧಿಸಿದಂತೆ ತಾಲೂಕ ಸಾರಿಗೆ ಅಧಿಕಾರಿಗಳ ಒಪ್ಪಿಗೆಯ ಮೇರೆಗೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಾಕೀರ್ ಪಾಟೀಲ, ಡಾ ಬೊಮ್ಮನಾಳ, ಶೇಖರ್ ಕೊಟ್ನೇಕಲ್,ಸಾರಿಗೆ ಅಧಿಕಾರಿ ಡಿಪೋ ಮ್ಯಾನೇಜರ್ ರಾಮನಗೌಡ, ಸಹಾಯಕ ಅಧಿಕಾರಿ ಹನುಮಂತರಾಯ ಸೇರಿದಂತೆ ಸಾರ್ವಜನಿಕರು ಇದ್ದರು.