ನೀರಿನ ಅರವಟಿಗೆಯಲ್ಲಿ ನೀರೇ ಇಲ್ಲ

ಮಸ್ಕಿ.ಏ.೨೮-ಇಲ್ಲಿಯ ಹಳೆ ಬಸ್ ನಿಲ್ದಾಣ ಬಳಿ ಕನ್ನಡ ಪರ ಸಂಘಟನೆ ವೊಂದು ಪ್ರಾರಂಭಿಸಿದ್ದ ಕುಡಿವ ನೀರಿನ ಅರವಟಿಗೆಯಲ್ಲಿ ನೀರೇ ಇಲ್ಲ ಎಂದು ಪ್ರಯಾಣಿಕರು ಮಾತನಾಡುತ್ತಿದ್ದಾರೆ.
ಉಪ ಚುನಾವಣೆ ಸಂದಂರ್ಭದಲ್ಲಿ ಕನ್ನಡ ಪರ ಸಂಘಟನೆ ವೊಂದರ ಮುಖಂಡರು ಇಲ್ಲಿಯ ಮುಖ್ಯ ವೃತ್ತಗಳ ಬಳಿಯ ಮೂರ್‍ನಾಲ್ಕು ಜಾಗಗಳಲ್ಲಿ ಅರವಟಿಗೆ ಪ್ರಾರಂಭಿಸಿದ್ದರು.
ಉಪ ಚುನಾವಣೆಯಲ್ಲಿ ಪಕ್ಷ ವೊಂದರ ಪರ ಭರ್ಜರಿ ಪ್ರಚಾರ ನಡೆಸಿದ ಮುಖಂಡರು ಮತದಾನ ಮುಗಿದ ನಂತರ ನೀರಿನ ಅರವಟಿಗೆ ಮರೆತಂತೆ ಕಾಣುತ್ತಿದೆ ಹಳೆ ಬಸ್ ನಿಲ್ದಾಣ ಬಳಿಯ ನೀರಿನ ಅರವಟಿಗೆಯಲ್ಲಿ ನೀರಿನ ಮಡಿಕೆಗಳು ಖಾಲಿ ಬಿದ್ದಿವೆ.
ನೀರಿನ ಅರವಟಿಗೆ ಪ್ರಾರಂಭಿಸಿ ದೊಡ್ಡ ಪ್ರಚಾರ ಪಡೆದ ಸಂಘಟನೆಯ ಮುಖಂಡರು ನೀರಿನ ಅರವಟಿಗೆಗಳತ್ತ ತಿರುಗಿ ನೋಡುತ್ತಿಲ್ಲ. ಅರವಟಿಕೆ ನೋಡಿ ಗ್ರಾಮೀಣ ಜನರು ನೀರು ಕುಡಿಯಲು ಬಂದರೆ ಖಾಲಿ ಮಡಿಕೆಗಳನ್ನು ಕಂಡು ವಾಪಸ್ ಹೋಗುತ್ತಿದ್ದಾರೆ. ಜನಪರ ಕಾಳಜಿ ತೋರಿದ ಸಂಘಟನೆ ಅರವಟಿಗೆಯಲ್ಲಿ ನೀರು ಪೂರೈಸಲು ಕಾಳಜಿವಹಿಸಬೇಕಿದೆ.