ನೀರಿನಲ್ಲಿ ಬೆಳಕು ಚದುರುವುದರಿಂದಸಮುದ್ರದ ನೀರಿಗೆ ನೀಲಿ ಬಣ್ಣ

ಸಂಜೆವಾಣಿ ವಾರ್ತೆಬಳ್ಳಾರಿ, ಫೆ.28: ಸೂರ್ಯನ ಬೆಳಕು ನೀರಿನಲ್ಲಿ ಚದುರುವುದರಿಂದ ಸಮುದ್ರದ ನೀರು ನೀಲಿಬಣ್ಣ ಕಾಣುತ್ತದೆ ಎಂಬ ಸತ್ಯ ಕಂಡುಹಿಡಿದುದ್ದಲ್ಲದೆ,ಗಾಜಿನ ಪಟ್ಟಕದ ಮೂಲಕ ಬೆಳಕನ್ನು ಹಾಯಿಸಿದಾಗ ಬೆಳಕು ಚದುರಿ ವಿವಿಧ ಬಣ್ಣಗಳಲ್ಲಿ ಕಾಣಿಸುತ್ತದೆ ಎಂದು ಸಂಶೋಧನೆ ಮಾಡಿ ಬೆಳಕಿನ ಚದುರುವಿಕೆ ಪರಿಣಾಮಗಳನ್ನು ಜಗತ್ತಿಗೆ ತಿಳಿಸಿ ಭೌತಶಾಸ್ತ್ರ ಕ್ಷೇತ್ರದಲ್ಲಿ ನೋಬಲ್ ಪಾರಿತೋಷಕ ಪಡೆದ  ಭಾರತ ದೇಶದ ಮೊಟ್ಟ ಮೊದಲ ಭೌತ ವಿಜ್ಞಾನಿ ಸರ್ ಸಿ.ವಿ.ರಾಮನ್ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ರಾಮನ್ ಅವರ ಬೆಳಕಿನ ಮೇಲಿನ ಪ್ರಯೋಗಗಳು ರಾಮನ್ ಪರಿಣಾಮಗಳೆಂದೇ ಕರೆಯಲ್ಪಡುತ್ತವೆ.ವಿಜ್ಞಾನ ಕ್ಷೇತ್ರಕ್ಕೆ ಆರ್ಯಭಟ, ವಿಕ್ರಮ ಸಾರಬಾಯಿ,ಜಗದೀಶ್ಚಂದ್ರಬೋಸ್,ಎ.ಪಿ.ಜೆ.ಅಬ್ದುಲ್ ಕಲಾಂ,ಹೋಮಿ ಜಹಂಗೀರ್ ಬಾಬ ಮುಂತಾದ ಭಾರತೀಯ ವಿಜ್ಞಾನಿಗಳು ಸಾಕಷ್ಟು ಕೊಡಿಗೆ ನೀಡಿದ್ದಾರೆ.ಆದ್ದರಿಂದ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ, ಕಲ್ಪನಾ ಶಕ್ತಿ, ವಿವೇಚನಾಶೀಲತೆ ಹಾಗೂ ಪ್ರಯೋಗಿಕ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಪ್ರತಿಭಾವಂತ ವಿದ್ಯಾರ್ಥಿಗಳಾದ ಕೀರ್ತಿ ಹಾಗೂ ಮೇಘಮಾಲಾ ಗೆ ಬಹುಮಾನ ವಿತರಿಸಲಾಯಿತು.ನಲಿಕಲಿ ಶಿಕ್ಷಕಿ ಕೆ.ಸುಮತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಗುಣ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ಶಿಡಗಿನಮೊಳ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ನೇತ್ರ ಸಹಾಯಕಿ ವಿಜಯ ಲಕ್ಷ್ಮೀ, ಶಿಕ್ಷಕರಾದ ವಿ.ಬಸವರಾಜ, ಎಂ.ಎಂ.ಚನ್ನಮ್ಮ, ರಾಮಾಂಜಿನೇಯ, ಕೀರ್ತನಾ,ಗೀತಾ ಮುಂತಾದವರು ಉಪಸ್ಥಿತರಿದ್ದರು.