
ಸಿರವಾರ,ಮಾ.ಂ೨- ತುಂಗಾಭದ್ರ ಅಚ್ಚುಕಟ್ಟು ಪ್ರದೇಶದ ಕೆಳಭಾಗಕ್ಕೆ ನೀರು ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ೧೫ ದಿನಗಳ ಕಾಲ ನಮ್ಮ ಭಾಗದ ರೈತರಿಗೆ ನೀರು ಹರಿಸುವಂತೆ ಒತ್ತಾಯಿಸಿ ರಾಯಚೂರು ನಗರಕ್ಕೆ ಸಂಪರ್ಕ ಕಲ್ಪಿಸುವ ೭ ಮೈಲ್ ಕ್ರಾಸ್‌ನಲ್ಲಿ ಸಾವಿರಾರು ರೈತರೊಂದಿಗೆ ರಸ್ತಾ ರೊಕ ಚಳುವಳಿಯನ್ನು ಪಕ್ಷಾತೀತವಾಗಿ ಹಮ್ಮಿಕೊಳಲಾಗಿದ್ದೂ, ರೈತರು ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು ಸಿರವಾರ, ಮಾನ್ವಿ, ರಾಯಚೂರು ತಾಲೂಕಿನ ವ್ಯಾಪ್ತಿಯ ತುಂಗಭದ್ರಾ ನಾಲೆಯನ್ನೆ ಅವಲಂಬಿತ ರೈತರಿಗೆ ಕಳೆದ ಒಂದು ತಿಂಗಳಿಂದ ನೀರಿಗೆ ತೊಂದರೆಯಾಗಿದೆ.
ಭತ್ತ, ಹತ್ತಿ, ಜೋಳ, ಮೆಣಸಿನಕಾಯಿ ಬಿತ್ತನೆ ಮಾಡಿದ್ದಾರೆ, ಕಾಳು ಕಟ್ಟುವ ಹಂತದಲ್ಲಿವೆ. ಈಗ ನೀರಿ ಅವಶ್ಯಕತೆ ಹೆಚ್ವು ಇದೇ ಆದರೆ ಮೇಲ್ಭಾಗದಲ್ಲಿಯೆ ನಮ್ಮ ನೀರನ್ನು ಬಳಕೆ ಮಾಡಿಕೊಂಡು ನಮಗೆ ನೀರು ಇಲದಂತೆ ಮಾಡಲಾಗಿದೆ. ಕೊನೆಭಾಗಕ್ಕೆ ನೀರು ಹರಿಸುವಲಿ ರೈತರು ವಿಫಲರಾಗಿದ್ದಾರೆ. ಜಿಲ್ಲಾಧಿಕಾರಿ ಸರಿಯಾಗಿ ಸ್ಪಂದನೆ ಮಾಡುತ್ತಿಲ. ಇದನ್ನಯ ಅರಿತು ರೈತ ಸಂಘದ ಮುಖಂಡ ಚಾಮರಸ ಮಾಲಿಪಾಟೀಲ್ ನೇತೃತ್ವದಲ್ಲಿ ಪಕ್ಷಾತೀತವಾಗಿ ಹೋರಾಟದ ಮಾಡಲು ನಿರ್ಧರಿಸಲಾಯಿತು.
ಮಾ. ಕೊನೆಯವರೆಗೂ ನೀರು ಹರಿಸುವಂತೆ ಒತ್ತಾಯಿಸಿ ಮಾ.೦೨ ಶನಿವಾರ ರಾಯಚೂರಿಗೆ ಸಂಪರ್ಕ ಕಲ್ಪಿಸುವ ೭ ಮೈಲ್ ನಲ್ಲಿ ೧೦ ಸಾವಿರ ರೈತರ ರಸ್ತಾರೋಕ ಚಳುವಳಿ ಮಾಡಲಾಗುವುದು ರೈತರು, ಜನಪ್ರತಿನಿಧಿಗಳು, ರಸಗೊಬ್ಬರ ಮಾರಾಟಗಾರರು ವ್ಯಾಪಾರಸ್ಥರು, ವಿವಿಧ ಸಂಘಟನೆಗಳ ಮುಖಂಡರು ಅದಿಕ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಿ ನೀರು ಪಡೆಯಬೇಕು ಎಂದರು.
ಜೆ.ಶರಣಪ್ಪಗೌಡ ಮಾತನಾಡಿ ಅನೇಕ ಬಾರಿ ಹೋರಾಟ ಮಾಡಿದರು ನೀರು ಹರಿಸುವಲಿ ಅದಿಕಾರಿಗಳು ವಿಫಲರಾಗಿದ್ದಾರೆ. ಜಿಲ್ಲಾಧಿಕಾರಿಗಳ ನಡುವೆ ಸಮನ್ವಯ ಇಲ್ಲದಂತಾಗಿದೆ. ಇಬ್ಬರೂ ಜಿಲ್ಲಾಧಿಕಾರಿಗಳ ಮೇಲೆ ಡಿವಿಷನಲ್ ಕಮಿಟಿ ರಚನೆ ಮಾಡಬೇಕು. ನೇರೆ ರಾಜ್ಯಕ್ಕೆ ನಿಗದಿಯಾದ ನೀರು ಹೇಗೆ ನೀಡುತ್ತಾರೋ ಅದೇ ರೀತಿ ನಮ್ಮ ಭಾಗಕ್ಕೆ ನಿಗದಿ ಮಾಡಿದ ನೀರು ನೀಡಬೇಕು. ಈ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬಾಗವಹಿಸಬೇಕು. ಎಲ್ಲಾ ಪಕ್ಷದ ಮುಖಂಡರು, ರೈತಸಂಘಗಳು, ರಕ್ಷಣಾ ವೇದಿಕೆ, ದಲಿತ ಸಂಘಟನೆಗಳು ಸ್ವಯಂಪ್ರೇರಿತವಾಗಿ ಭಾಗವಹಿಸಬೇಕು ಎಂದರು. ಜೆಡಿಎಸ್ ಹಿರಿಯ ಮುಖಂಡ ಜಿ.ಲೋಕರೇಡ್ಡಿ ಮಾತನಾಡಿ ಮೇಲ್ಬಾಗದ ಶಾಸಕರು, ಜನಪ್ರತಿನಿಧಿಗಳು ಪ್ರಭಾವದಿಂದ ನಮಗೆ ನೀರು ಬರುತ್ತಿಲ. ನಮ್ಮ ಜಿಲ್ಲೆಯ ಶಾಸಕರು, ಸಂಸದರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ೪೬ ನೇ ಮೈಲಿನ ಮೇಲ್ಭಾಗದಲ್ಲಿರುವ ಉಪಕಾಲುವೆಯ ನೀರು ಬಂದ್ ಮಾಡಬೇಕಯ, ಮುಖ್ಯಕಾಲುವೆಯ ಎಡದಂಡೆಗೆ ಅಕ್ರಮ ನೀರು ಬಳಕೆಯನ್ನು ತಡೆಯಬೇಕು ಅಂದಾಗ ನಮ್ಮ ಭಾಗಕ್ಕೆ ನೀರು ಬರುತ್ತವೆ ಎಂದರು.
ಹಿರಿಯ ಮುಖಂಡ ಚುಕ್ಕಿ ಸೂಗಪ್ಪ ಸಾಹುಕಾರ, ಎಂ,ಶ್ರೀನಿವಾಸ, ಹಂಪಯ್ಯ ನಾಯಕ, ಜೆ.ಶರಣಪ್ಪಗೌಡ, ಜಿ.ಲೋಕರೇಡ್ಡಿ, ಶಿವಶರಣಸಾಹುಕಾರ ಅರಕೇರಿ, ಶಿವಶರಣಗೌಡ ಲಕ್ಕಂದಿನ್ನಿ, ಉದಯಕುಮಾರ ಸಾಹುಕಾರ ಚಾಗಭಾವಿ, ನರಸಿಂಹರಾವಕುಲಕರ್ಣಿ, ಕೃಷ್ಣ ನಾಯಕ, ಮಲ್ಲಪ್ಪ, ಗ್ಯಾನಪ್ಪ,ದಾನಪ್ಪ, ಹೆಚ್.ಕೆ.ಅಮರೇಶ, ರಂಜೀತ್,ನಾಗರಾಜ, ರಾಮಯ್ಯಬೈನೇರ, ಶಿವಶರಣಗೌಡ, ಮಲ್ಲಪ್ಪ, ಅಮರೇಶ ಸಾಹುಕಾರ ಚಾಗಭಾವಿ ಸೇರಿದಂತೆ ಇನ್ನಿತರರು ಇದ್ದರು.