ನೀರಾವರಿ ಸಲಹಾ ಸಮಿತಿ ಸಭೆಗೆ ದರ್ಶನಾಪುರ ಮನವಿ

ಶಹಾಪುರ: ಜು.30:ಕೆಲ ದಿನಗಳ ಹಿಂದೆ ಮಳೆ ಕೊರತೆಯಾ ಗಿದ್ದರಿಂದ ಆತಂಕ ಸೃಷ್ಟಿಯಾಗಿತ್ತು, ಇದೀಗ ಸತತ ಮಳೆಯ ಕಾರಣ ಡ್ಯಾಂ ಗಳಲ್ಲಿ ಶೇ.50ಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿದೆ. ಒಳ ಹರಿವೂ ಇದ್ದು, ಆದಷ್ಟು ಬೇಗ ನೀರಾವರಿ ಸಲಹಾ ಸಮಿತಿ ಸಭೆ ಕರೆಯುವಂತೆ ಜಲಸಂಪನ್ಮೂಲ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಅವರು ಮನವಿ ಮಾಡಿದ್ದಾರೆ.ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿ ನಿರೀಕ್ಷೆಗೂ ಮೀರಿ ನೀರು ಸಂಗ್ರಹವಾಗುತ್ತಿರುವುದು ಸಮಾಧಾನ ತಂದಿದೆ. ನಗರಕ್ಕೆ ನಿರಂತರ ಕುಡಿವ ನೀರು ಸರಬರಾಜಿಗೆ 120 ಕೋಟಿ ರು.ವೆಚ್ಚದ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ. ತರಿತವಾಗಿ ಮಂಜೂರಿ ದೊರೆಯುವ ನಿರೀಕ್ಷೆ ಇದೆ ಎಂದು ಹೇಳಿದರು. ಈಗಾಗಲೇ ಭೀಮಾ ನದಿಯಿಂದ ನಗರಕ್ಕೆ ನೀರು ಸರಬರಾಜು ಮಾಡುವ 10 ಕೋಟಿ ರು. ವೆಚ್ಚದ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ. ಆ.15ರೊಳಗೆ ಕಾಮಗಾರಿ ಉದ್ಘಾಟನೆ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದರು.