ನೀರಾವರಿ ಯೋಜನೆ ನೆನೆಗುದಿಗೆ : ಅಧಿಕಾರಿಗಳಿಗೆ ತರಾಟೆ

ಲಿಂಗಸುಗೂರು,ಆ.೦೧-
ತಾಲ್ಲೂಕಿನ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಜಲದುರ್ಗ ಏತನೀರಾವರಿ ಯೋಜನೆ ನೆನೆಗುದಿಗೆ ಬಿದ್ದಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಬಾಕಿ ಇರುವ ಕಾಮಗಾರಿ ಶೀಘ್ರದಲ್ಲೇ ಪೂರ್ಣ ಗೊಳಿಸಲು ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಣ್ಣ ನೀರಾವರಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು ರವರು ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ನೀರಾವರಿ ಯೋಜನೆಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಲದುರ್ಗ ಏತನೀರಾವರಿ ಯೋಜನೆ ಹಳ್ಳ ಹಿಡಿದ ಪರಿಣಾಮ ವಾಗಿ ರೈತರಿಗೆ ಕೃಷಿ ಚಟುವಟಿಕೆಗೆ ಹೊಡೆತ ಬಿದ್ದಿದೆ ಇದರಿಂದಾಗಿ ಅದಿಕಾರಿಗಳ ಬೇಜವಾಬ್ದಾರಿತನ ಎಲ್ಲವೂ ಸಾಕ್ಷಿಕರಿಸುತ್ತದೆ ಸಚಿವರು ಜಲದುರ್ಗ ಏತನೀರಾವರಿ ಯೋಜನೆ ಸ್ಥಳಕ್ಕೆ ಖುದ್ದಾಗಿ ಭೇಟಿ ಮಾಡಿ ಪರಿಶೀಲನೆ ನಡೆಸಿದರು
೨೦೦೮ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಆದರೆ ಅಂದಿನಿಂದ ಇಂದಿನವರೆಗೂ ಯೋಜನೆಗೆ ಸರಿಯಾದ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಸುಮಾರು ಇಪ್ಪತ್ತು ವರ್ಷಗಳಿಂದಲೂ ಜಲದುರ್ಗ ಏತನೀರಾವರಿ ಅಭಿವೃದ್ಧಿ ಇಲ್ಲದೆ ರೈತರಿಗೆ ಅನ್ಯಾಯ ವಾಗಿರುತ್ತದೆ. ಇದರಲ್ಲಿ ತಾಂತ್ರಿಕ ದೋಷದಿಂದ ಅಪೂರ್ಣಗೊಂಡಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದಾಗ ತಕ್ಷಣವೇ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು.
ನವಲಿ ರಾಂಪುರ ಕೆರೆ ಸಚಿವರು ವೀಕ್ಷಣೆ ಲಿಂಗಸುಗೂರು ಮಸ್ಕಿ ತಾಲೂಕಿನ ೨೩ ಕೆರೆಗಳಿಗೆ ೪೫೫ಕೋಟಿ ಅನುದಾನವೂ ನೀರು ತುಂಬಿಸುವ ಯೋಜನೆಗಳ ಕಾಮಗಾರಿಗೆ ಅನುದಾನ ಮೀಸಲಿಡಲಾಗಿದೆ. ಈ ಕಾಮಗಾರಿಗಳಿಗೆ ಎರಡು ಹಂತಗಳಲ್ಲಿ ಟೆಂಡರ್ ಮಾಡಲಾಗುತ್ತದೆ. ಅದಕ್ಕಾಗಿ ಮೊದಲು ಹಂತದಲ್ಲಿ ೯೫ ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದರು.
ಹಳೆಯ ಕೆರೆಗಳಿಗೆ ಸಂರಕ್ಷಣೆ ಸಚಿವರು ಭರವಸೆ
ಲಿಂಗಸುಗೂರು ಹಾಗೂ ಮಸ್ಕಿ ತಾಲೂಕಿನ ಹಳೆಯ ಕೆರೆಗಳಿಗೆ ಸಂರಕ್ಷಣೆ ಮಾಡಲು ಸರ್ಕಾರ ನಿರ್ಧರಿಸಿದೆ ಹಾಗೂ ಹಳೆ ಕೆರೆ ನಿರ್ಲಕ್ಷ್ಯ ದಿಂದ ಹಾಳಾದ ಕೆರೆಗಳ ಪುನಶ್ಚೇತನ ಮಾಡಲು ಅಭಿವೃದ್ಧಿ ಪಡಿಸುವುದು ಸರ್ಕಾರದ ಆದ್ಯತೆಯಾಗಿದೆ. ರಾಜ್ಯದಲ್ಲಿ ಇರುವ ಕೆರೆಗಳ ಪುನಶ್ಚೇತನಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ಪಡೆಯಾಲಾಗುತ್ತದೆ ಸಚಿವ ಬೋಸರಾಜು ಸುದ್ದಿಗಾರರಿಗೆ ತಿಳಿಸಿದರು.
ಲಿಂಗಸೂಗೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ರಾಂಪೂರ (ನ) ಗ್ರಾಮದ ಹತ್ತಿರ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಕೆರೆ ತುಂಬುವ ಕಾಮಗಾರಿ ಸ್ಥಳಕ್ಕೆ,ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಭೇಟಿ ನೀಡಿ ಕಾಮಗಾರಿ ಪರೀಶಿಲಿಸಿದರು.
ಈ ಸಮಯದಲ್ಲಿ ಲಿಂಗಸುಗೂರು ಮಾಜಿ ಶಾಸಕರಾದ ಡಿ.ಎಸ್.ಹೂಲಗೇರಿ, ಶಾಸಕರಾದ ಮಸ್ಕಿ ಶಾಸಕರಾದ ಬಸನಗೌಡ ತುರವಿಹಾಳ, ಮಾಜಿ ಶಾಸಕರಾದ ರಾಜ್ ರಾಯಪ್ಪ ನಾಯಕ, ಲಿಂಗಸೂಗೂರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಭೂಪನಗೌಡ ಪಾಟೀಲ್, ಕರಡಕಲ್ ಮದಗಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದಾವುದ್ ಸಾಬ್ ಕಾಂಗ್ರೆಸ್ ಪಕ್ಷದ ಮುಖಂಡರಾದ ಪಾಮಯ್ಯ ಮುರಾರಿ ಅಮರಗುಂಡಪ್ಪ, ಮೇಟಿ ಮಹದೇವಯ್ಯ ಗೌಡುರ ವೆಂಕಟೇಶ್ ಗುತ್ತೆದಾರ ಮತ್ತು ಸಣ್ಣ ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ಶ್ರೀಹರಿ ಪ್ರಕಾಶ್ ಅದಿಕ್ಷಕ ಅಭಿಯಂತರರಾದ ಸುರೇಶ್ ಶರ್ಮಾ, ಕಾರ್ಯನಿರ್ವಾಹಕ ಅಭಿಯಂತರ ನಾಗನಗೌಡ ಸಾಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಸೂಗಪ್ಪ ಸಾಹಾಯಕ, ಇಂಜಿನಿಯರ್ ಪ್ರಲ್ಹಾದ್ ಬಿಜ್ಜೂರ ಸೇರಿದಂತೆ ಅಧಿಕಾರಿಗಳು ಕಾಂಗ್ರೇಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.