ನೀರಾವರಿ ಯೋಜನೆಗಳ ಕುರಿತ ಸಮಾಲೋಚನಾ ಸಭೆ

ದಾವಣಗೆರೆ.ನ.೧೮; ಜಿಲ್ಲೆಯ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ, ಜಗಳೂರು ತಾಲ್ಲೂಕಿನ ನೀರಾವರಿ ಯೋಜನೆ, 22 ಕೆರೆ ಏತ ನೀರಾವರಿ ಯೋಜನೆ ಮತ್ತು ಇತರೆ ನೀರಾವರಿ ಯೋಜನೆಗಳ ಕುರಿತ ಸಮಾಲೋಚನಾ ಸಭೆಯನ್ನು ಸಿರಿಗೆರೆ ಬೃಹನ್ಮಠದ  ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಂಸದರಾದ ಡಾ. ಜಿ.ಎಂ.ಸಿದ್ದೇಶ್ವರ  ನಡೆಸಿದರು.ಏತ ನೀರಾವರಿ ಯೋಜನೆಗಳು ನಿಗಧಿತ ಅವಧಿಯಲ್ಲಿ ಕಾರ್ಯಾರಂಭ ಮಾಡಲು ಜಗದ್ಗುರುಗಳು ಸಲಹೆ ನೀಡಿದರು. ಯೋಜನೆಯ ಸಾಧಕ ಬಾಧಕಗಳ ಕುರಿತು ಸಮಾಲೋಚನೆ ನಡೆಸಿ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ಸಂಸದರು ನೀಡಿದರು.ಈ ಸಂದರ್ಭದಲ್ಲಿ  ಶಾಸಕರಾದ ಎಸ್.ವಿ.ರಾಮಚಂದ್ರ,  ಪ್ರೊ. ಲಿಂಗಣ್ಣ, ಮಾಜಿ ಶಾಸಕರಾದ ಶಾಂತನಗೌಡ್ರು, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಲ್ಲಿಕಾರ್ಜುನ ಗುಂಗೆ, ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.