ನೀರಾವರಿ ನಿರ್ವಹಣೆ ಉಪನ್ಯಾಸ

ಧಾರವಾಡ,ಜ10: ಕೆ ಎಲ್ ಎಸ್ ವಿ ಡಿ ಐ ಟಿ ಹಳಿಯಾಳದ ಸಿವಿಲ್ ವಿಭಾಗವು ನೀರಾವರಿ ನಿರ್ವಹಣೆ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಲೋಕೋಪಯೋಗಿ ಅಭಿವೃದ್ಧಿ ಇಲಾಖೆಯ ನಿವೃತ್ತ ವ್ಯವಸ್ಥಾಪಕ ಅಭಿಯಂತರರಾದ ಡಿ ಎಸ್ ಮಾಡ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಕೃಷಿ ಕ್ಷೇತ್ರದಲ್ಲಿ ಸಮರ್ಪಕವಾಗಿ ನೀರು ಬಳಕೆಗೆ ನೀರಾವರಿ ರಚನೆ ಕುರಿತು ವಿವರಿಸುತ್ತ, ಉತ್ತಮ ನೀರಾವರಿ ವ್ಯವಸ್ಥೆಯು ಹೆಚ್ಚಿನ ಬೆಳೆಯನ್ನು ನೀಡಬಲ್ಲದೆಂದು ಹೇಳಿದರು. ಮೈಕ್ರೋ ನೀರಾವರಿ ಹಾಗೂ ಸುಧಾರಿತ ನೀರಾವರಿ ವ್ಯವಸ್ಥೆಯ ಕುರಿತು ವಿವರಣೆ ನೀಡಿದರು. ಸಮರ್ಪಕ ನೀರಾವರಿ ವ್ಯವಸ್ಥೆಯು ಅನಗತ್ಯ ನೀರು ಪೆÇೀಲಾಗುವುದನ್ನು ತಡೆದು ನೀರಿನ ಸದ್ಬಳಕೆಗೆ ಸಹಾಯಕವಾಗುವುದೆಂದು ನುಡಿದರು.
ಪೆÇ್ರ. ಎಸ್ ಜಿ ಹಿರೇಮಠ ಕಾರ್ಯಕ್ರಮ ಸಂಯೋಜಿಸಿದರು.