ನೀರಾವರಿ ಇಲಾಖೆ ಎಇಇ, ಇಇ ವಿರುದ್ದ ಶಾಸಕರ ಅಸಮಧಾನ

ಸಂಜೆವಾಣಿ ವಾರ್ತೆ
ಕೆ.ಆರ್.ಪೇm: ಆ.28:- ತಾಲ್ಲೂಕಿನಾದ್ಯಂತ ಮಳೆಯಾ ಕೊರತೆ ಹೆಚ್ಚಗಿದ್ದು ಬೆಳೆ ಪಸಲು ಬಿತ್ತನೆ ಮಾಡಿದ ರೈತರು ಸಂಕಷ್ಟದಲ್ಲಿರುವ ಸಮಯದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡದೇ ಕಾಲಾಹರಣ ಮಾಡುತ್ತಿರುವ ಕ್ರಮ ಸರಿಯಾದುದಲ್ಲ ಎಂದು ಶಾಸಕ ಹೆಚ್.ಟಿ.ಮಂಜು ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ದ ಹರಿಹಾಯ್ದರು.
ಅವರು ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಗೋವಿಂದನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಆ ವ್ಯಾಫ್ತಿಯ ಎಇಇ ಉಮೇಶ್ ಹಾಗೂ ಇಇ ಕಿಜರ್ ಅಹಮದ್ ರವರ ವಿರುದ್ದ ತೀವ್ರ ಅಸಮಧಾನ ವ್ಯಕ್ತಪಡಿಸಿದರು.
35 ದಿನಗಳ ನಿಗಧಿತ ಸಮಯದಲ್ಲಿ ತಾಲ್ಲೂಕಿನಲ್ಲಿರುವ ಎಲ್ಲಾ ಕೆರೆಕಟ್ಟೆಗಳನ್ನು ತುಂಬಿಸಬೇಕಾದ ಮಹತ್ತರ ಸನ್ನಿವೇಶದಲ್ಲಿ ಅಧಿಕಾರಿಗಳು ನಾಲೆಗಳಿಗೆ ನೀರು ಹರಿಸಿ ರೈತರಿಗೆ ನೇರವಾಗುದನ್ನು ಬಿಟ್ಟು ಕುಂಟು ನೆಪಹೇಳುತ್ತಾ ಕಾಲಕಳೆಯುತ್ತಿರುವ ವಿಚಾರ ತಿಳಿದ ಶಾಸಕರು ಖುದ್ದು ಇಇ ಹಾಗೂ ಇನ್ನುಳಿದ ಅಧಿಕಾರಿಗಳ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿಸರು.
ಕಾಳುವೆಯಲ್ಲಿನ ಹೂಳನ್ನೇ ತೆಗೆಯದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ಸೋಮವಾರದ ಒಳಗೆ ನಾಲೆಯಲ್ಲಿರುವ ಹೂಳು ತೆಗೆದು ನಾಲೆಗೆ ನೀರು ಹರಿಸಿ ಕೆರೆಕಟ್ಟೆ ತುಂಬಿಸಿ ರೈತರ ಬೆಳೆಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಸೋಮವಾರದ ಒಳಗೆ ನೀರು ಹರಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.