ನೀರಲಕಟ್ಟಿ ನಿಧನಕ್ಕೆ ಸಂತಾಪ

ಧಾರವಾಡ, ಏ 24: ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕೇಂದ್ರ ಸಮಿತಿಯ ನಿಕಟಪೂರ್ವ ಕಾರ್ಯಾಧ್ಯಕ್ಷರು ಹಾಗೂ ಧಾರವಾಡದ ಆರ್. ಎಫ್. ನೀರಲಕಟ್ಟಿ ಅವರು ನಿಧನರಾಗಿದ್ದು, ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲೆಂದು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಕೇಂದ್ರ ವಿದೇಶಾಂಗ ಸಹಾಯಕ ಸಚಿವರು ಹಾಗೂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕೇಂದ್ರ ಸಮಿತಿ ಅಧ್ಯಕ್ಷರು ವಿ. ಮುರಳಿಧರನ್, ದಕ್ಷಿಣ ಭಾರತ ಕರ್ನಾಟಕ ಪ್ರಾಂತ ಅಧ್ಯಕ್ಷರು ಈರೇಶ ಅಂಚಟಗೇರಿ, ಅರುಣ ಜೋಶಿ, ಎಂ. ಆರ್. ಪಾಟೀಲ, ಎಸ್. ಬಿ. ಹಿಂಚಿಗೇರಿ. ಡಾ. ರಾಧಾಕೃಷ್ಣನ್ ಹಾಗೂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮುಖ್ಯಸ್ಥರು ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದಿಂದ ಪ್ರಾರ್ಥಿಸಿ ಸಂತಾಪ ವ್ಯಕ್ತಪಡಿಸಲಾಯಿತು.
ಈ ವೇಳೆ ಅವರ ಭಾವಚಿತ್ರಕ್ಕೆ ಪುಷ್ಪನಮನಗಳ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಈರೇಶ ಅಂಚಟಗೇರಿ, ನೀರಲಕಟ್ಟಿ ಅವರ ಕೊಡುಗೆ ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಕ್ಕೆ ಅಪಾರ ಕೊಡುಗೆ ನೀಡಿದ್ದು, ಮುಂಬರುವ ಪೀಳಿಗೆ ಕೂಡಾ ಅವರನ್ನು ನೆನೆದು ಮುಂದುವರೆಯಬೇಕು. ಅವರ ಅಗಲಿಕೆ ತುಂಬಲಾರದ ನಷ್ಟ ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಿ ಅವರ ಕುಟುಂಬಕ್ಕೆ ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿ ನೀಡಲೆಂದು ನುಡಿದರು.