
ಮಾನ್ವಿ,ಏ.೧೫- ನಮ್ಮ ಭಾರತ ದೇಶ ಇದೊಂದು ಪ್ರಜಾಪ್ರಭುತ್ವ ರಾಷ್ಟ. ನಮ್ಮದು ಸಂವಿಧಾನತ್ಮಕ ಸರಕಾರ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ರಾಜಕೀಯ ಹಕ್ಕನ್ನು ತನ್ನ ಪ್ರಜೆಗಳಿಗೆ ಕೊಡಲಾಗಿರುತ್ತದೆ. ಅಲ್ಲದೇ ಮತದಾನದ ಹಕ್ಕು ಇತರೆ ಹಕ್ಕುಗಳಂತೆ ನಾಗರೀಕರಿಗೆ ಸಂವಿಧಾನಾತ್ಮಕವಾಗಿ ಹಕ್ಕನ್ನು ನೀಡಲ್ಪಟ್ಟಿದೆ. ಇಂತಹ ಅವಕಾಶವನ್ನು ಮಹಾ ಪ್ರಜ್ಞಾನವಂತರಾಗಿ ವಿವೇಚನೆಯಿಂದ ಮತ ಚಲಾಯಿಸಿ ಈರೇಶ ತಾಲ್ಲೂಕು ಐಇಸಿ ಸಂಯೋಜಕರು ನರೇಗಾ ಕೂಲಿಕಾರರಿಗೆ ತಿಳಿಸಿದರು.
ಇಂದು ಶನಿವಾರ ನೀರಮಾನವಿ ಗ್ರಾಮ ಪಂಚಾಯತಿಯಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸ್ವಿಪ್ ಚಟುವಟಿಕೆಯ ಅಂಗವಾಗಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆರೆ ಕೆಲಸ ನಿರ್ವಹಿಸುವ ಕೂಲಿಕಾರರಿಗೆ, ಮತದಾನದ ಮಹತ್ವವನ್ನು ಅರಿಯಲು ಸ್ವಿಪ್ ಚಟುವಟಿಕೆ ಹಮ್ಮಿಕೊಳ್ಳಲಾಯಿತು.
೧೮ ವರ್ಷ ತುಂಬಿ ಎಲ್ಲಾ ವಯಸ್ಕ ಪ್ರೌಡ ಪ್ರಜೆಗಳಿಗೆ ಮತ ಚಲಾಯಿಸುವ ಹಕ್ಕು ನೀಡಲಾಗಿದೆ. ಸಾಮಾನ್ಯವಾಗಿ ಚುನಾವಣೆ ಗುಪ್ತ ಮತದಾನ ಪದ್ಧತಿ ಮೂಲಕ ನಡೆಯುವಂತಹದ್ದು, ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ರೂಪಿಸಿರುವ ವ್ಯವಸ್ಥೆ ಇದಾಗಿದೆ. ಇಂತಹ ಅತ್ಯುತಮ ವ್ಯವಸ್ಥೆಯಲ್ಲಿ ಭಾರತಿಯ ಪ್ರಜೆಗಳಾದ ನಾವು ಪ್ರಭುದ್ಧತೆಯಿಂದ ಅಮೂಲ್ಯವಾದ ಮತವನ್ನು ಮೇ ೧೦ ರಂದು ಗ್ರಾಮದ ಎಲ್ಲಾರೂ ತಪ್ಪದೇ ಮತ ಚಲಾಯಿಸಿ, ಶತ ಪ್ರತಿಶತ ಮತದಾನ ರಾಯಚೂರು ಜಿಲ್ಲೆಯ ವಾಗ್ದಾನವನ್ನು ಯಶಸ್ವಿಯಾಗಿ ಪೂರೈಸೋಣ ಎಂದು ಮನವಿ ಮಾಡಿದರು ನಂತರ ಮತದಾನದ ಪ್ರತಿಜ್ಞೆವಿಧಿ ಭೋದಿಲಸಾಯಿತು.
ಏಪ್ರಿಲ್ ೧ ರಿಂದ ನರೇಗಾ ಕೂಲಿ ಮೊತ್ತವು ೩೦೯ ರಿಂದ ೩೧೬ ಕ್ಕೆ ಹೆಚ್ಚಿಸಲಾಗಿದೆ. ಮೇಟ್ ಗಳು ಎನ್.ಎಮ್.ಎಮ್.ಎಸ್ ಅ?ಯಪ್ ಮೂಲಕ ಪ್ರತಿದಿನದ ಹಾಜರಾತಿಯನ್ನು ಪಡೆಯಬೇಕು. ಯೋಜನೆಯಡಿ ಸಿಗುವ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಪಡೆಯಲು ಮಾಹಿತಿ ತಿಳಿಸಲಾಯಿತು. ಈ ಸಂದರ್ಭದಲ್ಲಿ ಸಿದ್ದರಾಮ ಬಿ.ಎಪ್.ಟಿ, ಮೇಟಿಗಳು ಮತ್ತು ಕೂಲಿಕಾರರು ಹಾಜರಿದ್ದರು