ನೀರಮಾನ್ವಿ,ಸಂಗಾಪೂರು ಗ್ರಾಮದಲ್ಲಿ ಆರೋಗ್ಯ ತಪಾಸಣೆ

ಮಾನ್ವಿ,ಆ.೦೧- ತಾಲೂಕಿನ ಸಂಗಾಪುರ ಮತ್ತು ನೀರಮಾನ್ವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಆರೋಗ್ಯ ಅಡಿಯಲ್ಲಿ ಗ್ರಾಮೀಣಾ ಮಟ್ಟದ ಆರೋಗ್ಯದ ಹಿತ ದೃಷ್ಟಿಯಿಂದ
ಸರಕಾರಿ ಪ್ರೌಢ ಶಾಲೆಯಲ್ಲಿ ಎರಡು ದಿನಗಳ ಮುಂಚಿತವಾಗಿ ಕೆ ಎಚ್ ಪಿ ಟಿ ಸಂಯೋಕರು ಮರಿಲಿಂಗಣ್ಣ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಈ ಶಾಲೆಗಳಿಗೆ ಭೇಟಿ ನೀಡಿ ಗ್ರಾಮ ಆರೋಗ್ಯ ಘಟಕಗಳಾದ ,ಕ್ಷಯ,ಬಾಲ್ಯವಿವಾಹ, ನ್ಯೂಟ್ರೀಷನ್, ಮುಟ್ಟಿನ ನೈರ್ಮಲ್ಯತೆ, ಮಾನಸಿಕ ಆರೋಗ್ಯ, ಈ ಎಲ್ಲಾ ವಿಷಯಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ನಂತರ ಮರುದಿನ ೧೫ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳಿಗೆ ಮತ್ತು ಶಾಲಾ ಶಿಕ್ಷಕರಿಗೆ ಹಾಗೂ ಅಡುಗೆ ಸಿಬ್ಬಂದಿಯವರಿಗೆ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತು.೧೫ ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳಿಗೆ ಅನಿಮಿಯಾ ತಪಾಸಣೆ ಮಾಡಿದಾಗ ಸಂಗಾಪುರ ಸರಕಾರಿ ಪ್ರೌಢ ಶಾಲೆಯಲ್ಲಿ ೩೦ ಮಕ್ಕಳಿಗೆ ತಪಾಸಣೆ ಮಾಡಿದಾಗ ಅದರಲ್ಲಿ ೫ ಮಕ್ಕಳಲ್ಲಿ ರಕ್ತದ ಪ್ರಮಾಣ ಕಡಿಮೆ ಕಂಡು ಬಂದಿತು.
ನಂತರ ನೀರಮಾನ್ವಿ ಸರಕಾರಿ ಪ್ರೌಢ ಶಾಲೆಯಲ್ಲಿ ೬೨ ಮಕ್ಕಳಿಗೆ ಅನಿಮಿಯಾ ತಪಾಸಣೆ ಮಾಡಿದಾಗ ಇದರಲ್ಲಿ ೮ ಮಕ್ಕಳಿಗೆ ರಕ್ತದ ಪ್ರಮಾಣ ಕಡಿಮೆ ಕಂಡು ಬಂದ ಕಾರಣ ಎಲ್ಲ ಮಕ್ಕಳಿಗೆ ಪೌಷ್ಟಿಕ ಆಹಾರ ಸೇವಿಸಬೇಕು ಮತ್ತು ಹೆಚ್ಚು ನೀರು ಕುಡಿಯಬೇಕು, ಹಸಿರುಕಾಳು ಸೊಪ್ಪು ಸೇವನೆ ಮಾಡುವುದರಿಂದ ರಕ್ತದ ಪ್ರಮಾಣ ಹೆಚ್ಚು ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಮುದಾಯ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದರು.
ನಂತರ ಶಾಲೆಯ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿ ಹೆಚ್ಚಿನ ಚಿಕಿತ್ಸೆಗೆ ತಾಲೂಕಾ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು ಶಾಲಾ ಮಕ್ಕಳ ಮತ್ತು ಶಿಕ್ಷಕರ ಅಭಿಪ್ರಾಯದಂತೆ ಈ ರೀತಿಯಾಗಿ ಆರೋಗ್ಯ ಶಿಬಿರ ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿ ಕಂಡುಬರುವಂತಹ ಅಪೌಷ್ಟಿಕತೆ ಮತ್ತು ರಕ್ತಹೀನತೆ ಬಗ್ಗೆ ನಮಗೆ ತಿಳಿಸಿದ್ದೀರಿ ಇದರಿಂದ ನಮಗೆ ಮುಂದಿನ ಆರೋಗ್ಯ ಕಾಪಾಡಿಕೊಳ್ಳಲು ಮಾಹಿತಿ ನೀಡಿದರು.