ನೀರಮಾನ್ವಿಗೆ ಗುಡ್ಡಕ್ಕೆ ಸಚಿವರ ಭೇಟಿ

ಮಾನ್ವಿ ಆ ೧೮ :- ತಾಲೂಕಿನ ನೀರಮಾನ್ವಿ ಗ್ರಾಮದ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದರಿಂದ ನೀರಮಾನ್ವಿ ಗುಡ್ಡದ ಪ್ರದೇಶಕ್ಕೆ ಅರಣ್ಯ ಅಧಿಕಾರಿಗಳೊಂದಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್‌ಎಸ್ ಬೋಸರಾಜು ಜಿ ಅವರು ಭೇಟಿ ನೀಡಿ ಶೀಘ್ರ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಚಿರತೆಯನ್ನು ಸೆರೆಹಿಡಿಯಲು ಗುಡ್ಡದಲ್ಲಿ ಹೆಚ್ಚುವರಿ ಬೋನ್ ಗಳನ್ನು ಅಳವಡಿಸಿ ಜನರಿಗೆ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.