ನೀರಮಾನವಿ ದಲಿತರಿಂದ ಮೀಸಲಾತಿ ಸಂಭ್ರಮ

ಮಾನ್ವಿ,ಮಾ.೨೫- ತಾಲೂಕಿನ ನೀರಮಾನವಿ ಗ್ರಾಮದ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಬಾಬು ಜಗಜೀವನ್ ರಾಮ್ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಯುವಕರು ಸೇವೆ ಹಾರ ಹಾಕಿ ಡೊಳ್ಳು ಕುಣಿತದ ಮೂಲಕ ಸದಾಶಿವ ಆಯೋಗದ ವರದಿಯಂತೆ ದಲಿತ ಮೀಸಲಾತಿಯನ್ನು ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದರಿಂದ ಸಂಭ್ರಮಾಚರಣೆ ಮಾಡಿದರು.
ನಂತರ ಮುಖಂಡ ಚಂದ್ರಶೇಖರ ಕುರ್ಡಿ ಮಾತಾನಾಡಿ, ನಮ್ಮ ದಲಿತ ಮಾದಿಗ ಸಂಘಟನೆಯ ಕನಿಷ್ಠ ಮೂವತ್ತು ವರ್ಷಗಳ ನಿತ್ಯ ನಿರಂತರ ಹೋರಾಟವನ್ನು ಪರಿಗಣಿಸಿದ ಈಗೀಗ ಸರ್ಕಾರ ಮೀಸಲಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ವರದಿಯನ್ನು ಪ್ರಕಟಿಸುತ್ತದೆ ಎನ್ನುವ ಭರವಸೆ ನನಗಿದೆ ಎಂದರು.
ನಂತರ ಲಕ್ಷ್ಮಣ್ ಪಟಕನದೊಡ್ಡಿ ಹಾಗೂ ಪ್ರಭುರಾಜ ಕೊಡ್ಲಿ, ಚನ್ನಬಸವ ಮಾಡಗಿರಿ, ಯಲ್ಲಪ್ಪ ಅಂಗಡಿ, ಹನುಮಂತ ತಾಸಿ, ಶಿವರಾಮ ಹಾಗೂ ಗೆಳೆಯರ ಬಳಗ ಮಾತಾನಾಡಿ ನಮ್ಮ ಸಮುದಾಯಕ್ಕೆ ಬಿಜೆಪಿ ಸರ್ಕಾರ ಉತ್ತಮವಾದ ನಿರ್ಣಾಯದ ಮೂಲಕ ಮಾದಿಗರಿಗೆ ೬% ಚಲುವಾದಿಗೆ ೫.೫ ಇನ್ನುಳಿದ ದಲಿತ ಸಮುದಾಯಕ್ಕೆ ೪.೫ ಒಳ ಮೀಸಲಾತಿಯನ್ನು ನೀಡಿ ನಮ್ಮ ಹಕ್ಕನ್ನು ನಮಗೆ ನೀಡಿದ್ದು ತುಂಬಾ ಖುಷಿಯಾದ ಸಂಗತಿಯಾಗಿದೆ ಎಂದರು..
ನಂತರ ಹಲಗೆ, ಡೊಳ್ಳು, ಬಾಣಗಳನ್ನು ಹಚ್ಚಿ ಜಯ ಘೋಷಣೆಗಳು ಕೂಗುವ ಮೂಲಕ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾದಿಗ ಮುಖಂಡರಾದ ಚಂದ್ರಶೇಖರ ಕುರ್ಡಿ. ಲಕ್ಷ್ಮಣ್ ಪಟಕನದೊಡ್ಡಿ, ಪ್ರಭುರಾಜ ಕೊಡ್ಲಿ, ಚನ್ನಬಸವ ಮಾಡಗಿರಿ, ಯಲ್ಲಪ್ಪ ಅಂಗಡಿ, ಹನುಮಂತ ತಾಸಿ, ಶರಣಬಸವ, ಶಿವರಾಮ, ದೇವರಾಜ,ಅಟೋ ಲಿಂಗಪ್ಪ, ರವಿ, ಮಲ್ಲಿಕಾರ್ಜುನ, ರಮೇಶ, ನರಸಪ್ಪ ಮೇಸ್ತ್ರಿ, ಮರಿಲಿಂಗ, ರಾಮಣ್ಣ,ಅರುಣ ಗಡಿಗೆ, ಸೇರಿದಂತೆ ನೂರಾರು ಯುವಕರು ಭಾಗವಹಿಸಿದ್ದರು.