ನೀರನ್ನು ಪರೀಕ್ಷಿಸಿ ಸರಬರಾಜು ಮಾಡಿ

ಚನ್ನಮ್ಮನ ಕಿತ್ತೂರ,ಮೇ29: ತಾಲೂಕಾದ್ಯಂತ ತಾಪಂ ವ್ಯಾಪ್ತಿಗೆ ಒಳಪಡುವ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಗಳಿಗೆ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ, ತಹಶೀಲ್ದಾರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಇನ್ನುಳಿದ ಅಧಿಕಾರಿಗಳು ಭೇಟಿ ನೀಡಿ ಪರೀಶಿಲಿಸಿದರು
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭೀಮಪ್ಪಾ ತಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ. ಸ್ಥಳೀಯರಿಂದ ಮಾಹಿತಿ ಪಡೆದು ಪ್ರಸ್ತುತ ಕುಡಿಯುವ ನೀರನ್ನು ಪರೀಕ್ಷಿಸಿ ಪ್ರತಿ ಗ್ರಾಮಗಳಿಗೂ ಸರಿಯಾಗಿ ನೀರು ಸರಬರಾಜು ಮಾಡಬೇಕೆಂದು ಗ್ರಾಪಂ ಅಧಿಕಾರಿಗೆ ತಿಳಿಸಿದರು.
ಈಗಾಗಲೇ ಸರಕಾರ ಕುಡಿಯುವ ನೀರಿಗಾಗಿ ಕೊಳವೆ ಭಾವಿ ಕೊರೆಸಿ ಗ್ರಾಮಗಳಲ್ಲಿ ನೀರಿನ ತೊಂದರೆಯಾಗದಂತೆ ನೋಡಿಕೊಂಡಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು. ಇದಕ್ಕೂ ಮೀರಿ ನೀರಿನ ಕೊರತೆಯಾದರೆ ನೀರಿನ ಹೆಚ್ಚಿನ ಬೇಡಿಕೆ ಇದ್ದ ಗ್ರಾಮಗಳಲ್ಲಿ ಟ್ಯಾಂಕಗಳ ಮೂಲಕ ನೀರನ್ನು ಒದಗಿಸಲು ಸೂಚಿಸಿದರು.
ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಇಂಜಿನೀಯರ್, ಸಹಾಯಕ ನಿರ್ದೇಶಕ, ಸೇರಿದಂತೆ ಗ್ರಾಮಸ್ಥರಿದ್ದರು.