ನೀನಾದ ಗೀತೆಗಳ ಬಿಡುಗಡೆ

ಆನೇಕಲ್. ಜ.೧- ಚಂದಾಪುರ ಪುರಸಭೆ ವ್ಯಾಪ್ತಿಯ ಇಗ್ಗಲೂರು ಗ್ರಾಮದ ಬಳಿಯಿರುವ ಚಿನ್ನಾರೆಡ್ಡಿ ಬಿಲ್ಡಿಂಗ್ ಆವರಣದಲ್ಲಿ ಆನೇಕಲ್ ಹರೀಶ್ ಮತ್ತು ಅವರ ತಂಡದಿಂದ ರಚಿಸಿರುವ ನೀನಾದ ಗೀತೆಗಳ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಕೃಷ್ಣಂ ರಾಜು, ಬಿಎಸ್ಪಿ ಪಕ್ಷದ ರಾಜ್ಯ ಖಜಾಂಚಿ ಡಾ|| ಚಿನ್ನಪ್ಪ ಚಿಕ್ಕಹಾಗಡೆ, ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಆದೂರು ಪ್ರಕಾಶ್, ಹೋರಾಟ ಗಾರರಾದ ಶ್ರೀಮತಿ ಮಮತಾ, ಮುಖಂಡರಾದ ಶ್ರೀಕಾಂತ್ ರೆಡ್ಡಿ, ಶ್ರೀಮತಿ ರೂಪ ರವಿರೆಡ್ಡಿ, ಕೆ.ಮಂಜುಳ. ವಿಜಯಕುಮಾರಿ ರಾಮಸ್ವಾಮಿ, ಬಿದರಗೆರೆ ಮೂರ್ತಿ, ಮಂಜುನಾಥ್ ಹಾಜರಿದ್ದರು.