
ಕೋಲಾರ,ಮಾ,೩೦-ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ೨೦೨೩ ರ ಸಂಬಂಧ ಚುನಾವಣಾ ಆಯೋಗದಿಂದ ಚುನಾವಣಾ ಪ್ರಕ್ರಿಯೆಗಳ ಅಧಿಸೂಚನೆ ಹೊರಡಿಸಲಾಗಿರುತ್ತದೆ. ಅದರಂತೆ ಏಪ್ರಿಲ್ ೧೩ ರಿಂದ ೨೦ ರ ವರೆಗೆ ನಾಮಪತ್ರ ಸ್ವೀಕೃತಿ, ಏಪ್ರಿಲ್ ೨೧ ರಂದು ನಾಮಪತ್ರ ಪರಿಶೀಲನೆ ಏಪ್ರಿಲ್ ೨೪ ರಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನಾಂಕವಾಗಿರುತ್ತದೆ. ಮತದಾನವು ಮೇ ೧೦ ರಂದು ಹಾಗೂ ಮತ ಎಣಿಕೆ ಮೇ ೧೩ರಂದು ನಡೆಯಲಿದೆ ಎಂದು ಕೋಲಾರ ಉಪ ವಿಭಾಗಾಧಿಕಾರಿಗಳು ಹಾಗೂ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ವೆಂಕಟಲಕ್ಷ್ಮೀ ಅವರು ತಿಳಿಸಿದರು.
ಇಂದು ಕೋಲಾರ ತಾಲ್ಲೂಕು ಕಛೇರಿ ನ್ಯಾಯಾಲಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಚುನಾವಣಾ ಆಯೋಗದಿಂದ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಉಪವಿಭಾಗಾಧಿಕಾರಿಗಳು (ಮೊ: ೮೧೦೫೫೯೫೮೫೯) ಇವರನ್ನು ಚುನಾವಣಾಧಿಕಾರಿಯನ್ನಾಗಿ ಹಾಗೂ ತಹಸೀಲ್ದಾರ್ (ಮೊ: ೯೯೦೨೨೨೯೨೧೩) ರವರನ್ನು ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನೇಮಕಾತಿ ಮಾಡಲಾಗಿದೆ.
ನಂ: ೧೪೮-ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಕೋಲಾರ ಕಸಬಾ, ವೇಮಗಲ್, ನರಸಾಪುರ, ವಕ್ಕಲೇರಿ ಹೋಬಳಿಗಳು ಸೇರಿರುತ್ತದೆ. ಕ್ಷೇತ್ರದಲ್ಲಿ ಒಟ್ಟು ೨೮೪ ಮತಗಟ್ಟೆಗಳಿದ್ದು, ಈ ಪೈಕಿ ೭೨ ಸೂಕ್ಷ್ಮ ಸಾಮಾನ್ಯ ೨೧೨ ವರ್ನಲಬಲಿಟಿ ಮತಗಟ್ಟೆಗಳಿರುತ್ತದೆ.ಪುರುಷರು ೧೧೮೧೫೯,ಮಹಿಳೆಯರು ೧೨೦೨೩೮ ಹಾಗೂ ಇತರೆ ೫೫ ಒಟ್ಟು ೨೩೮೪೫೨ ಮತದಾರರಿರುತ್ತಾರೆ.
ಸೆಕ್ಸ್ ರೇಷಿಯೋ ೧೦೧೭ ಇರುತ್ತದೆ. ವಿಕಲಚೇತನ ಮತದಾರರು ಗಂಡಸರು ೧೪೩೩, ಹೆಂಗಸರು ೯೪೨ ಇತರೆ ೧ ಒಟು ೨೩೭೬ ಮತದಾರರು ಇರುತ್ತಾರೆ. ಚುನಾವಣಾ ಆಯೋಗದ ನಿದೇರ್ಶನದಂತೆ ಈ ಬಾರಿ ವಿಕಲಚೇತನ ಹಾಗೂ ಹಿರಿಯ ನಾಗರಿಕರು ೮೦+ ಮತದಾರರಿಗೆ ಅಂಚೆ ಮೂಲಕ ಮತ ಚಲಾಯಿಸಲು ಅನುವು ಮಾಡಿಕೊಡಲಾಗಿದೆ. ಇದರಂತೆ ಹಿರಿಯ ನಾಗರಿಕರು ಗಂಡಸರು ೨೨೯೦ ಹೆಂಗಸರು ೩೨೭೬ ಸೇರಿದಂತೆ ಒಟ್ಟು ೫೫೬೬ ಮತದಾರರಿರುತ್ತಾರೆ.ಯುವ ಮತದಾರರು ೫೮೮೨ ಇರುತ್ತಾರೆ. ಚುನಾವಣೆಗೆ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.
ನಮ್ಮ ಕ್ಷೇತ್ರಕ್ಕೆ ಒಟ್ಟು ೩೧೨ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, ೩೧೨ ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ ೬೨೪ ಮತಗಟ್ಟೆ ಅಧಿಕಾರಿಗಳು ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ. ಮತಗಟ್ಟೆ ಅಧಿಕಾರಿಗಳಿಗೆ ೨ ಹಂತದ ತರಬೇತಿಯನ್ನು ಸರ್ಕಾರಿ ಮಹಿಳಾ ಕಾಲೇಜು, ಕೋಲಾರ ಇಲ್ಲಿ ಏರ್ಪಡಿಸಲಾಗಿದೆ. ನೀತಿ ಸಂಹಿತೆ ಜಾರಿ ಹಾಗೂ ಚುನಾವಣಾ ಅಕ್ರಮಗಳನ್ನು ತಡೆಯಲು ೨೫ ಸೆಕ್ಟರ್ ಅಧಿಕಾರಿಗಳನ್ನು ಹಾಗೂ ೬ ತಂಡಗಳನ್ನು. ಇದನ್ನು ಹೊರತು ಪಡಿಸಿ ಎಸ್.ಎಸ್.ಟಿ / ಎಂ.ಸಿ.ಎಂ.ಸಿ ತಂಡಗಳನ್ನು ಸಹಾ ನೇಮಕಾತಿ ಮಾಡಲಾಗಿದೆ.
ಈ ಸಂಬಂಧ ಪ್ರಸ್ತುತ ೩ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಕ್ಯಾಲನೂರು, ಮೂರಾಂಡಹಳ್ಳಿ ಮತ್ತು ರಾಮಸಂz ಹೆಚ್ಚುವರಿಯಾಗಿ ೧ ಚೆಕ್ ಪೋಸ್ಟ್ ಪ್ರಗತಿಯಲ್ಲಿದೆ. ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಸ್ಥಳವನ್ನಾಗಿ ಸರ್ಕಾರಿ ಜೂನಿಯರ್ ಕಾಲೇಜು ಇಲ್ಲಿ ಏರ್ಪಡಿಸಿದೆ.