ನೀತಿ ಸಂಹಿತೆ ಜಾರಿ- ಪ್ಲೆಕ್ಸ್ ಬ್ಯಾನರ್ ತೆರವು


ಸಂಡೂರು:ಮಾ: 31:  ಸಂಡೂರು: ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುತ್ತಿದಂತೆ ತಾಲೂಕು ಚುನಾವಣಾ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗುವ ಮೂಲಕ ತಮ್ಮ ಕೆಲಸ ಅರಂಭಿಸಿದ್ದು ಕಂಡು ಬಂದಿತು.
ಪಟ್ಟಣದಲ್ಲಿಯ ಎಲ್ಲಾ ಭಾಗದಲ್ಲಿರುವ ಬ್ಯಾನರ್, ಪ್ಲೆಕ್ಸ್‍ಗಳನ್ನು ಪುರಸಭೆಯ ಸಿಬ್ಬಂದಿಗಳು ತಕ್ಷಣ ಅವುಗಳನ್ನು ತೆರವುಗೊಳಸುವಂತಹ ಕಾರ್ಯ ಪ್ರಾರಂಭಿಸಿದರು, ಪ್ರಮುಖವಾಗಿ ಪಟ್ಟಣದಲ್ಲಿಯ ಪುರಸಭೆ ಬಸ್ ನಿಲ್ದಾಣ, ತಾಲೂಕು ಪಂಚಾಯಿತಿ, ತಾಲೂಕು ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಹಶೀಲ್ದಾರ್ ಕಚೇರಿ, ಹೀಗೆ ಎಲ್ಲಾ ಇಲಾಖೆಯ ಮುಂಭಾಗದಲ್ಲಿ ಸರ್ಕಾರದಿಂದ ಹಾಕಿದ, ಮುಖ್ಯಮಂತ್ರಿಗಳಿರುವ ಬ್ಯಾನರ್‍ಗಳನ್ನು ತೆರವುಗೊಳಿಸಿದರು.
ಅಲ್ಲದೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಯಾವುದೇ ರಾಜಕಾರಣಿಗಳ ಭಾವಚಿತ್ರಗಳಿರುವುದನ್ನು, ಮತ್ತು ಕಛೇರಿಗಳ ಮುಂಭಾಗದಲ್ಲಿರುವ ಇಲಾಖೆಯ, ಮಂತ್ರಿಗಳಿರುವ ಬ್ಯಾನರ್‍ಗಳನ್ನು ತೆರವುಗೊಳಿಸಿದರು, ಅಲ್ಲದೆ ಖಾಸಗಿ ಸ್ಥಳಗಳಲ್ಲಿ ರಾಜಕಾರಣಿಗಳ ಬ್ಯಾನರ್‍ಗಳನ್ನು ಸಹ ತೆರವು ಗೊಳಿಸಿದ್ದು ಕಂಡು ಬಂದಿತು, ಒಟ್ಟಾರೆಯಾಗಿ ಕಟ್ಟು ನಿಟ್ಟಿನ ಹಾಗೂ ಯಾವುದೇ ಪಕ್ಷದ, ರಾಜಕಾರಣಿಗಳ ಭಾವ ಚಿತ್ರ ಇರುವಂತಹ ಭಿತ್ತಿಪತ್ರಗಳನ್ನು ತೆರವುಗೊಳಿಸುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಪಾಲಿಸುತ್ತಿದ್ದಾರೆ, ಅಲ್ಲದೆ ಈಗಾಗಲೇ ತಾಲೂಕಿನ ನಾಲ್ಕು ದಿಕ್ಕುಗಳಲ್ಲಿಯೂ ಸಹ ಪೋಲಿಸ್ ಇಲಾಖೆ, ಅಬಕಾರಿ ಇಲಾಖೆ, ಕಂದಾಯ ಇಲಾಖೆ ಚೆಕ್ ಪೋಸ್ಟಗಳಲ್ಲಿ ತಪಾಸಣೆ ಕಾರ್ಯವನ್ನು ಪ್ರಾರಂಭಿಸಿರುವುದು ಕಂಡು ಬಂದಿತು. ಒಟ್ಟಾರೆ ನ್ಯಾಯ ಸಮ್ಮತ, ನಿಷ್ಪಕ್ಷಪಾತ ಚುನಾವಣೆ ನಡೆಸಲು ತಾಲೂಕು ಚುನಾವಣಾ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆ
ಎಚ್ಚರಿಕೆ: ಪುರಸಭೆಯ ಅನುಮತಿ ಇಲ್ಲದೇ ಜಾಹಿರಾತು ಅಥವಾ ಪ್ರಚಾರದ ಬ್ಯಾನರ್‍ಗಳನ್ನು ಅಳವಡಿಸುವಂತಿಲ್ಲ, ಅನುಮತಿ ಇಲ್ಲದೆ ಅಳವಡಿಸಿದರೆ ದಂಡವಿಧಿಸುವುದರ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಖಾಜಾ ಎಂ. ಮೋಯಿನುದ್ದೀನ್‍ರವರು ಸಾರ್ವಜನಿಕರಿಗೆ ಎಚ್ಚರಿಕೆ ಗಂಟೆ ಬಾರಿಸಿದರು.
ನೇಮಕ: ವಿಧಾನಸಭೆಗೆ ದಿನಾಂಕ: ಘೋಷಣೆಯಾದ ಬೆನ್ನಲ್ಲೇ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶರಣಬಸವರಾಜರವರನ್ನು ಚುನಾವಣಾಧಿಕಾರಿಯಾಗಿ ಘೋಷಿಸಿಸಲಾಗಿದೆ.