ಸೈದಾಪುರ:ಮಾ.31: ಕರ್ನಾಟಕ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಬುಧವಾರ ಪಟ್ಟಣದ ವಿವಿಧಡೆ ಸರ್ಕಾರಿ ಹಾಗೂ ರಾಜಕೀಯ ನಾಯಕರ ಬ್ಯಾನರ್, ಕಟೌಟ್ ತೆರವು ಮಾಡಲಾಯಿತು.
ಪಟ್ಟಣದ ಬಸವೇಶ್ವರ ವೃತ್ತÀ, ಕನಕ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ವಿವಿಧಡೆ ಕಟ್ಟಡಗಳ ಮೇಲೆ ಹಾಕಲಾದ ಬ್ಯಾನರ್‍ಗಳು, ಅಂಗಡಿಗಳ ಮುಂಭಾಗದಲ್ಲಿ ಅಂಟಿಸಲಾದ ಪೋಸ್ಟರ್‍ಗಳನ್ನು, ಹಾಗೂ ಗೋಡೆಗಳ ಮೇಲೆ ಬರೆದಿರುವ ರಾಜಕೀಯ ಪಕ್ಷದ, ನಾಯಕರ ಹೆಸರು, ಸರ್ಕಾರದ ವಿವಿಧ ಯೋಜನೆಗಳ ಕುರಿತಾದ ಮಾಹಿತಿ ನೀಡುವ ಜಾಹಿರಾತುಗಳು ಕಾಣದಂತೆ ಬಿಳಿ ಬಣ್ಣವನ್ನು ಹಚ್ಚಿದರು. ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿರುವ ವಿವಿಧ ಪಕ್ಷಗಳ ಚಿಹ್ನೆಯಿರುವ ಧ್ವಜಗಳನ್ನು, ನಾಯಕರ ಭಾವಚಿತ್ರವಿರುವ ಪೋಸ್ಟರ್‍ಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಆದೇಶದ ಮೇರೆಗೆ ಸಿಬ್ಬಂದಿಯವರು ತೆರೆವುಗೊಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ರಮೇಶ, ಲಂಕಪ್ಪ, ರಾಜಪ್ಪ ಕ್ಯಾತನಾಳ ಸೇರಿದಂತೆ ಇತರರಿದ್ದರು.