ನೀತಿ ಸಂಹಿತೆ ಉಲ್ಲಾಂಘಿಸಿದರೆ ಕಾನೂನು ಕ್ರಮ- ಡಂಬಳ

ಮಸ್ಕಿ.ಮಾ.೨೩-ಮಸ್ಕಿ ವಿಧಾನ ಸಭೆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಯಾಗಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ ರಾಜಕೀಯ ಪಕ್ಷಗಳ ಮುಖಂಡರು ನೀತಿ ಸಂಹಿತೆ ಪಾಲನೆ ಮಾಡಬೇಕು ಇಲ್ಲವಾದಲ್ಲಿ ಕಾನೂನು ಕ್ರಮ ಅನಿವಾರ್ಯ ಎಂದು ಚುನಾವಣಾಧಿಕಾರಿ, ಲಿಂಗಸುಗೂರು ಸಹಾಯಕ ಆಯುಕ್ತ ರಾಜ ಶೇಖರ ಡಂಬಳ ಹೇಳಿದರು.
ಇಲ್ಲಿಯ ತಾಲೂಕು ಪಂಚಾಯಿತಿ ಬಳಿಯ ಕಚೇರಿಯಲ್ಲಿ ವಿವಿ. ಪ್ಯಾಟ್ ಪ್ರಾತ್ಯಕ್ಷಿಕೆ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು. ವಿಧಾನ ಸಭೆ ಕ್ಷೇತ್ರದಲ್ಲಿ ೨ ಲಕ್ಷ ೬ ಸಾವಿರಕ್ಕೂ ಹೆಚ್ಚು ಜನ ಮತ ದಾರರಿದ್ದಾರೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೩೦೫ ಮತ ಗಟ್ಟೆಗಳನ್ನು ಸ್ಥಾಪಿಸಲಾಗುವುದು ಒಟ್ಟು ೩೭ ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ೨೮ ಲಕ್ಷ ರೂ ವೆಚ್ಚ ಮಾಡಬಹುದು ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಬಹಿರಂಗ ಸಭೆಗಳಲ್ಲಿ ೫೦೦ ಜನ ಒಳಗಾಂಣದಲ್ಲಿ ನಡೆಯುವ ಸಭೆಗಳಿಗೆ ೧೦೦ ಜನ ಸೇರಿಸಲು ಅವಕಾಶ ನೀಡಲಾಗಿದೆ ನಿಯಮ ಉಲ್ಲಂಘಿಸಿದ ಪಕ್ಷಗಳ ಮುಖಂಡರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಂಬಳ ಹೇಳಿದರು.
ಸಭೆ, ಸಮಾರಂಭ ನಡೆಸುವ ಪಕ್ಷಗಳಿಗೆ ಪರವಾನಿಗೆ ನೀಡಲು ಏಕ ಗವಾಕ್ಷಿ ಯೋಜನೆಯಲ್ಲಿ ತ್ವರಿತಗತಿಯಲ್ಲಿ ಪರವಾನಿಗೆ ನೀಡಲಾಗುವುದು ನಾಮಪತ್ರ ಸಲ್ಲಿಸಲು ಬರುವ ಅಭ್ಯರ್ಥಿ ಜತೆ ಒಬ್ಬರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ಇದೆ ನೀತಿ ಸಂಹಿತಿ ಉಲ್ಲಂಘನೆ ತಡೆಯಲು ಕ್ಷಿಪ್ರ ಕಾರ್ಯಾಚರಣೆ, ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ ವಯೋ ವೃದ್ಧ, ವಿಕಲ ಚೇತನರಿಗೆ ಅಂಚೆ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ವಯೋ ವೃದ್ಧರು ನಿಗದಿತ ನಮೂನೆಯ ಅರ್ಜಿ ಸಲ್ಲಿಸಿದ ನಂತರ ಅಧಿಕಾರಿಗಳ ಸಮ್ಮುಖದಲ್ಲಿ ಮತದಾರರು ಮನೆಯಲ್ಲಿ ತಮ್ಮ ಹಕ್ಕು ಚಲಾಯಿಸ ಬಹುದು ಎಂದರು. ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯ ಬಳಗಾನೂರು, ಮುದ್ದಾಪೂರ, ಸಂತೆ ಕೆಲ್ಲೂರ, ಉಮಲೂಟಿ, ಕವಿತಾಳ ಕ್ರಾಸ್ ಮತ್ತು ಮುದಗಲ್ ಕ್ರಾಸ್ ಬಳಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗುವುದು ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ೭೬೧೮೭೧೯೪೮೫ ಮೊ. ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು ನಾಮಪತ್ರ ಸಲ್ಲಿಸಲು ಅಭ್ಯರ್ಥಿ ಗಳು ಇನ್ಮುಂದೆ ಲಿಂಗುಸುಗೂರು ಪಟ್ಟಣಕ್ಕೆ ತೆರಳ ಬೇಕಾಗಿಲ್ಲ ಮಸ್ಕಿ ಪಟ್ಟಣದ ವಾಲ್ಮೀಕಿ ಭವನದಲ್ಲಿರುವ ತಾ.ಪಂ. ಕಚೇರಿ ಗೆ ಬಂದು ನಾಮಪತ್ರ ಸಲ್ಲಿಸ ಬಹುದು ಮತ ಎಣಿಕೆ ಕೇಂದ್ರ ಇನ್ನು ಗುರುತು ಮಾಡಿಲ್ಲ ನಾನಾ ಪಕ್ಷಗಳ ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆ ಪಾಲನೆ ಮಾಡಬೇಕು ಎಂದು ಚುನಾವಣಾಧಿಕಾರಿ ರಾಜಶೇಖರ ಡಂಬಳ ಹೇಳಿದರು. ತಹಸೀಲ್ದಾರ್ ಬಲರಾಂ ಕಟ್ಟಿಮನಿ ಇದ್ದರು.