ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ ನಾಯಕರ ಮೇಲೆ ಪ್ರಕರಣ ದಾಖಲು

ಕಲಬುರಗಿ,ಏ.3: ಶರಣಬಸವೇಶ್ವರ ಜಾತ್ರೆಯ ಅನ್ನದಾಸೋಹ ಕಾರ್ಯಾಕ್ರಮದಲ್ಲಿ ಬಿಜೆಪಿ ರಾಜಕೀಯ ವ್ಯಕ್ತಿಗಳ ಬ್ಯಾನರ್ ಹಾಕಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಬಿಜೆಪಿ ರಾಜಕೀಯ ನಾಯಕರ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಕಲಬುರಗಿಯ ಶರಣಬಸವೇಶ್ವರ ಜಾತ್ರೆಯ ಅಂಗವಾಗಿ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಬ್ರಹ್ಮಪುರದ ಕಲ್ಯಾಣಿ ಪೆಟ್ರೋಲ್ ಪಂಪ್ ಹತ್ತಿರ ಬಿ.ಜಿ ಪಾಟೀಲ್ ಫೌಂಡೇಷನ್ ವತಿಯಿಂದ ಅನ್ನದಾಸೋಹ ಕಾಂiÀರ್iಕ್ರಮ ಹಮ್ಮಿಕೊಳ್ಳಲಾಗಿತ್ತು.ಅನ್ನದಾಸೋಹದ ಬ್ಯಾನರ್‍ನಲ್ಲಿ ಬಿ.ಜೆ.ಪಿ ಮುಖಂಡ ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ್ ಹಾಗೂ ಬಿ.ಜೆ.ಪಿ ನಗರ ಅಧ್ಯಕ್ಷ ಚಂದು ಪಾಟೀಲ್ ಹಾಗೂ ಇನ್ನಿತರ ನಾಯಕರ ಭಾವ ಚಿತ್ರಗಳನ್ನು ಹಾಕಿ ಅನ್ನದಾಸೋಹ ಏರ್ಪಡಿಸಲಾಗಿತ್ತು. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಬ್ರಹ್ಮಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.