ನೀತಿ, ನಿಯತ್ತು ಬಿಜೆಪಿ ತಾಕತ್ತು: ರವಿ

ದಾವಣಗೆರೆ ನಗರದಲ್ಲಿ ಇಂದು ನಡೆದ ಬಿಜೆಪಿ ರಾಜ್ಯ ಎಸ್.ಟಿ. ಮೋರ್ಚಾ ಪ್ರಶಿಕ್ಷಣ ವರ್ಗ ಸಮಾಲೋಚನಾ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜುರವರು ಉದ್ಘಾಟಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಶಾಸಕ ಎಸ್.ವಿ. ರಾಮಚಂದ್ರ, ಮೋರ್ಚಾ ಅಧ್ಯಕ್ಷ ತಿಪ್ಪರಾಜು ಹವಾಲ್ದಾರ್, ಜಿಲ್ಲಾಧ್ಯಕ್ಷ ಎಂ. ವೀರೇಶ್, ಮತ್ತಿತರರು ಇದ್ದಾರೆ.

ದಾವಣಗೆರೆ, ಸೆ.೩- ನೀತಿ, ನಿಯತ್ತು ಇದರ ಆಧಾರದಲ್ಲಿ ಬಿಜೆಪಿ ಪಕ್ಷ ಬೆಳೆದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಾಖ್ಯಾನಿಸಿದರು.
ನಗರದ ಪೂಜಾ ಇಂಟರ್ ನ್ಯಾಷನಲ್ ಹೊಟೇಲ್ ಸಭಾಂಗಣದಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಎಸ್ ಟಿ ಮೋರ್ಚಾ ವತಿಯಿಂದ ನಡೆದ ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಹಾಗೂ ೩ ದಿನಗಳ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪಕ್ಷವನ್ನು ಸರ್ವ ಸ್ಪರ್ಶಿ ಸರ್ವವ್ಯಾಪಿ ಮಾಡುವ ಉದ್ದೇಶದಿಂದ ಮೋರ್ಚಾ ಮಾಡಲಾಗಿದೆ. ಬಿಜೆಪಿ ಮಾತ್ರ ಮಂಡಲಮಟ್ಟದಿಂದ ರಾಷ್ಟ್ರೀಯಮಟ್ಟದವರೆಗೆ ಇರುವ ಏಕೈಕ ಪಕ್ಷವಾಗಿದೆ.ಎಸ್ ಟಿ ಸಮುದಾಯ ಹತ್ತಾರು ವರ್ಷದಿಂದ ಹಲವಾರು ಕೊಡುಗೆ ನೀಡಿದೆ ರಾಮಾಯಣ ಜನಮಾಸದಲ್ಲಿ ಆಳವಾಗಿ ಬೇರೂರಿಸಿದ್ದು ಮಹರ್ಷಿ ವಾಲ್ಮೀಕಿಯವರನ್ನು ಮರೆಯಲು ಸಾಧ್ಯವಿಲ್ಲ. ರಾಮನ ಜೊತೆಗೆ ವಾಲ್ಮೀಕಿ ಇದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಿಂಧುರ ಲಕ್ಷ್ಮಣ, ಮದಕರಿ ನಾಯಕ, ವೆಂಕಟಪ್ಪ ನಾಯಕ, ಸಂಗೊಳ್ಳಿ ರಾಯಣ್ಣ ಅವರನ್ನು ಕಡೆಗಣಿಸಲು ಸಾಧ್ಯವಿಲ್ಲ. ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ಕಟ್ಟೀಬದ್ದವಾಗಿದೆ ಎಂದರು.ಮೊದಲ ಬಾರಿಗೆ ಎಪಿಜೆ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿ ಮಾಡಲಾಯಿತು. ಆಯ್ಕೆ ಮಾಡುವ ಮೂಲಕ ಎರಡನೇ ಬಾರಿಗೆ ರಾಮನಾಥನ್ ಕೋವಿಂದ್ ಮೂಲಕ ದಲಿತ ಸಮುದಾಯ ಹಾಗೂ ಮೂರನೇ ಬಾರಿ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ರಾಷ್ಟ್ರಪತಿ ಆಯ್ಕೆ ಮಾಡಿ ಬಿಜೆಪಿ ಬದ್ದತೆ ತೋರಿದೆ. ಸಾಮಾಜಿಕ ಬದ್ದತೆ ಜೊತೆಗೆ ಬಿಜೆಪಿ ನೀತಿ ದೇಶ ಹಾಗೂ ಹಿಂದುತ್ವ ನೀತಿ, ಕರೀಬಿಕಲ್ಯಾಣ ನಮ್ಮ ನೀತಿಯಾಗಿದೆ.ಸಂಸದ ಜಿ.ಎಂ ಸಿದ್ದೇಶ್ವರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ಮೋರ್ಚಾಗಳು ಸಕ್ರೀಯವಾಗಿವೆ. ಪ್ರದಾನಿಯವರು ಎಲ್ಲಾ ವರ್ಗಕ್ಕೂ ಅನುದಾನ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಮೋರ್ಚಾ ಗಳ ಸಹಕಾರ ಮುಖ್ಯ. ಕೇಂದ್ರ ಹಾಗೂ ರಾಜ್ಯದ ಸಾಧನೆಗಳನ್ನು ಎಲ್ಲರಿಗೂ ತಲುಪಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮಾತನಾಡಿ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಬೇಕು.ಕೆಲವೇ ತಿಂಗಳಲ್ಲಿ ರಾಜ್ಯದ ಚುನಾವಣೆ ಬರಲಿದೆ ಎಲ್ಲರೂ ಹೆಚ್ಚು ಕೆಲಸ ಮಾಡುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಬೇಕು.ಎಲ್ಲರ ಮೇಲೆ ಜವಾಬ್ದಾರಿ ಇದೆ.ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು.ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಎಲ್ಲಾ ಸಮುದಾಯ ಒಗ್ಗೂಡಿಸಿ ಕೆಲಸ ಮಾಡಬೇಕು.ಪಕ್ಷ ನಮಗೆ ತಾಯಿ ಇದ್ದಂತೆ ಪಕ್ಷದ ಆದೇಶವನ್ನು ಚಾಚು ತಪ್ಪದೆ ಪಾಲಿಸಬೇಕು ಎಂದರು.ವೇದಿಕೆಯಲ್ಲಿ ಎಸ್ ಟಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ತಿಪ್ಪರಾಜು ಹವಾಲ್ದಾರ್,ಸತ್ಯನಾರಾಯಣ ರೆಡ್ಡಿ,ಗಂಗಾಧರ್ ನಾಯ್ಕ್ ಮಹೇಶ್ ತೆಂಗಿನಕಾಯಿ, ಶಾಸಕರುಗಳಾದ ಎಸ್.ವಿ ರಾಮಚಂದ್ರ,ಎಸ್ ಎ ರವೀಂದ್ರನಾಥ, ಮಾಡಾಳು ವಿರೂಪಾಕ್ಷಪ್ಪ, ಪ್ರೊ.ಲಿಂಗಪ್ಪ,ಪರಿಷತ್ ಸದಸ್ಯ ನವೀನ್, ಜಿಲ್ಲಾಧ್ಯಕ್ಷ ವಿರೇಶ್ ಹನಗವಾಡಿ,ಶ್ರೀನಿವಾಸನ್ ದಾಸಕರಿಯಪ್ಪ,ಜಗದೀಶ್, ಸುಧಾ ಜಯರುದ್ರೇಶ್ ಮತ್ತಿತರರಿದ್ದರು.