ನೀತಿಸಂಹಿತೆ ಉಲ್ಲಂಘನೆ ಮಿನಿಆಂಬುಲೆನ್ಸ್ ಸೀಜ್

ಖಾಸಗಿ ಆಸ್ಪತ್ರೆ ವಾಹನಕ್ಕೆ ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ಭಾವಚಿತ್ರ
ದೇವದುರ್ಗ.ಏ.೦೬-ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ತಾಲೂಕಿನ ಅರಕೇರಾದ ನಾಡಗೌಡ ಆಸ್ಪತ್ರೆಯ ಮಿನಿಆಂಬುಲೆನ್ಸ್‌ಅನ್ನು ಆಯೋಗ ಇಚ್ಚೇಗೆ ಸೀಜ್ ಮಾಡಿ ಪ್ರಕರಣ ದಾಖಲಿಸಿದೆ. ಮಿನಿಆಂಬುಲೆನ್ಸ್ ಗ್ಲಾಸ್‌ಗೆ ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ಭಾವಚಿತ್ರವಿದ್ದು, ಪಟ್ಟಣದಲ್ಲಿ ಓಡಾಡುತಿತ್ತು. ಅರಕೇರಾ ಪ್ಲೈಯಿಂಗ್ ಸ್ಕಾಡ್‌ಗಳಾದ ಸೋಮಲಿಂಗಪ್ಪ, ಬಸವರಾಜ ಸಿದ್ದರೆಡ್ಡಿ ಪರಿಶೀಲನೆ ನಡೆಸಿ ವಾಹನ ಸೀಜ್ ಮಾಡಿ, ಪಟ್ಟಣ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಐಎಂವಿ ಕಾಯ್ದೆಯಡಿ ಚಾಲಕ ಪಕೀರಯ್ಯ ದೇವಿಂದ್ರಪ್ಪ ನಾಯಕ, ಮಾಲೀಕ ಹನುಮಂತ್ರಾಯ ಅಯ್ಯಣ್ಣ ನಾಡಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪಿಐ ಕೆ.ಹೊಸಕೇರಪ್ಪ ತಿಳಿಸಿದ್ದಾರೆ.