ನೀತಾ ಜೊತೆ ಬಿರಾದಾರ ಹೆಜ್ಜೆ

“ಸಿಂಗಲ್ ಕಣ್ಣಾ ಹಾರಸ್ತಿ.. ಡಬ್ಬಲ್ ಹಾರ್ನಾ ಬಾರಸ್ತಿ..” ಎಂಬ ಪಕ್ಕಾ ನಾಟೀ ಸ್ಟೈಲ್ ಹಾಡಿಗೆ ಹಿರಿಯ ಹಾಸ್ಯ ಕಲಾವಿದ ವೂಜನಾಥ್ ಬಿರಾದಾರ್ ನಟಿ ನೀತಾ ಜೊತೆ ಹೆಜ್ಜೆ ಹಾಕಿದ್ದು ಚಿತ್ರತಂಡ ಫುಲ್ ಖುಷ್ ಆಗಿದೆ.

ಬಿರಾದಾರ ನಟನೆಯ ಐನೂರನೇ ಚಿತ್ರ “ನೈಂಟಿ ಹೊಡಿ ಮನೀಗ್ ನಡಿ” ಹಾಡಿನ ಚಿತ್ರೀಕರಣ ಸಾಗಿದೆ.
‘ಸಿಂಗಲ್ ಕಣ್ಣಿ’ನ ಹಾಡಿಗೆ ಚುಟು-ಚುಟು ಖ್ಯಾತಿಯ ಸಾಹಿತಿ ಶಿವು ಭೇರಗಿ ಸಾಹಿತ್ಯ ಬರೆದು ರಾಗ ಸಂಯೋಜಿಸಿದ್ದಾರೆ‌. ಶಮಿತಾ ಮಲ್ನಾಡ್ ಮತ್ತು ರವೀಂದ್ರ ಸೊರಗಾಂವಿ ಹಿನ್ನೆಲೆಯಲ್ಲಿ ಧ್ವನಿಯಾಗಿದ್ದಾರೆ.ಭೂಷಣ್ ಕೊರಿಯೋಗ್ರಫಿ ಮಾಡಿದ್ದಾರೆ.
ರತ್ನಮಾಲಾ ಬಾದರದಿನ್ನಿ ನಿರ್ಮಾಣದ ಚಿತ್ರಕ್ಕೆ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜೋಡಿ ನಿರ್ದೇಶಕರು.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಬಿರಾದಾರ್ ಜೊತೆಯಾಗಿ ಹಿರಿಯ ನಟ ಕರಿಸುಬ್ಬು, ಮಾಣಿಕ್ಯ ಧರ್ಮ, ಪ್ರಶಾಂತ್ ಸಿದ್ಧಿ, ಅಭಯ್ ವೀರ್, ನೀತಾ, ಪ್ರೀತು ಪೂಜಾ, ಆರ್.ಡಿ ಬಾಬು, ವಿವೇಕ್ ಜಂಬಗಿ, ರುದ್ರಗೌಡ ಬಾದರದಿನ್ನಿ ಮುಂತಾದವರು ತೆರೆ ಹಂಚಿಕೊಂಡಿದ್ದಾರೆ.
ಕಣ್ಮನ ರಂಜಿಸುವ ಈ ಹಾಡು ಜನ ಮನ ಗೆಲ್ಲಲಿದೆ ಎಂಬುದು ಚಿತ್ರತಂಡದ ವಿಶ್ವಾಸ. ಚಿತ್ರೀಕರಣಕ್ಕೆ ಡಿಸೆಂಬರ್ ಹೊತ್ತಲ್ಲಿ ಕುಂಬಳಕಾಯಿ ಕಾಣಿಸುವ ಯೋಚನೆ ಚಿತ್ರತಂಡದ್ದು.ಚಿತ್ರಕ್ಕೆ ಕೃಷ್ಣ ನಾಯ್ಕರ್ ಛಾಯಾಗ್ರಹಣವಿದೆ.