ಬೀದರ:ಜು.6: ನಗರದ ಸಪ್ತಗಿರಿ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಜುಲೈ 3 ರಂದು ಪ್ರಸಕ್ತ ಸಾಲಿನ ಪಿ.ಯು.ಸಿ. ದ್ವಿತೀಯ ವರ್ಷ ಪರೀಕ್ಷೆಯಲ್ಲಿ ಶೇ. 95% ಕ್ಕೂ ಅಧಿಕ ಅಂಕ ಗಳಿಸಿದ 4 ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಕೊಡುಗೆಯಾಗಿ ನೀಡಲಾಯಿತು ಹಾಗೂ ನೀಟ್ ಪರೀಕ್ಷೆಯಲ್ಲಿ ಅರ್ಹರಾದ 10 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಅವರಲ್ಲಿ ಶಿವಾರೆಡ್ಡಿ ಗೋಪಾಲರೆಡ್ಡಿ ಆಲ್ ಇಂಡಿಯಾ ರ್ಯಾಂಕ್ 7800, ನಾಗೇಶ ಮಲ್ಲಿಕಾರ್ಜುನ ಆಲ್ ಇಂಡಿಯಾ ರ್ಯಾಂಕ್ 12000, ಸಹಾನಾ É ಶಿವರಾಜ ಆಲ್ ಇಂಡಿಯಾ ರ್ಯಾಂಕ್ 15000, ಮನೀಷ್ ಶೇಷಪ್ಪಾ ಆಲ್ ಇಂಡಿಯಾ ರ್ಯಾಂಕ್ 8212, ಭಾಗ್ಯಶ್ರೀ ದಶರಥ, ಅಜಯ ರಮೇಶ, ಬಸವಾದಿತ್ಯ ಗಣಪತಿ, ವಿಶ್ವನಾಥ ಬಸವರಾಜ, ಪಲ್ಲವಿ ವಿಠಲ, ಅಶ್ವಿನಿ ಮಾಣಿಕ ಇವರೆಲ್ಲರು ನೀಟ್ ಪರೀಕ್ಷೆಯಲ್ಲಿ ಅರ್ಹತೆಯನ್ನು ಹೊಂದಿರುತ್ತಾರೆ.
ಪ್ರಸಕ್ತ ಸಾಲಿನಲ್ಲಿ ಅಭಿಜಿತ ರವಿ 2022-23 ರ ಜೆ.ಇ.ಇ. ಮೆನ್ಸ್‍ನಲ್ಲಿ ಆಲ್ ಇಂಡಿಯಾ ರ್ಯಾಂಕ್ 306 ಪಡೆದು, ಎನ್.ಐ.ಟಿ. ಔರಂಗಾಬಾದನಲ್ಲಿ ಪ್ರವೇಶ ಪಡೆದಿರುತ್ತಾನೆ. ಅಂದು ಆ ವಿದ್ಯಾರ್ಥಿಗೂ ಕೂಡ ಸನ್ಮಾನಿಸಲಾಯಿತು. ಕಾಲೇಜಿನ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜನಸೇವಾ ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀಮತಿ ಸೌಭಾಗ್ಯವತಿ ಜಲಾದೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ ಕಾಲೇಜಿನ ಉಪನ್ಯಾಸಕರಾದ ಮನೋಜಕುಮಾರ ಹಾಗೂ ಎಸ್.ವಿ.ಇ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀನಿವಾಸ ಡಿ. ತಾಂದಳೆ ಹಾಗೂ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಗೋವಿಂದ ಡಿ. ತಾಂದಳೆ ಇವರು ಪಿ.ಯು.ಸಿ. ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಶೇ. 95% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಾದ ಸಂಗಮೇಶ ರಾಜಕುಮಾರ ಶೇ. 96% ರಷ್ಟು, ರಕ್ಷಿತಾ ಗಣಪತಿ ಶೇ. 96% ರಷ್ಟು, ಶಿವಾರೆಡ್ಡಿ ಗೋಪಾಲರೆಡ್ಡಿ ಶೇ 95% ರಷ್ಟು, ಭಾಗ್ಯಶ್ರೀ ದಶರಥ ಶೇ. 95% ರಷ್ಟು ಇವರುಗಳನ್ನು ಲ್ಯಾಪ್‍ಟಾಪ್ ವಿತರಿಸಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ದೊಡ್ಡ ಗುರಿ ಹೊಂದಿರಬೇಕು, ಶಿಸ್ತು, ಅನುಶಾಸನ ಪಾಲಿಸಿ, ಕಠಿಣ ಪರಿಶ್ರಮದಿಂದ ಓದಿದರೆ ತನ್ನ ಗುರಿ ಮುಟ್ಟಲು ಸಾಧ್ಯ, ವಿಶೇಷವಾಗಿ ವಿದ್ಯಾರ್ಥಿಗಳು ಮೊಬೈಲ್‍ನಿಂದ ದೂರ ಇರಬೇಕು, ಇದರಿಂದ ವಿದ್ಯಾರ್ಥಿಗಳು ಏಕಾಗೃತೆ ಹಾಗೂ ಓದಿನ ಮೇಲೆ ಪರಿಣಾಮ ಬೀರುತ್ತದೆ ಹಾಗೂ ತಂದೆ-ತಾಯಿ ಇವರನ್ನು ಗೌರವಿಸಿ, ಅವರ ಕನಸನ್ನು ನನಸಾಗಿಸಬೇಕೆಂದು ಜನಸೇವಾ ಶಾಲೆಯ ಆಡಳಿತಾಧಿಕಾರಿ ಶ್ರೀಮತಿ ಸೌಭಾಗ್ಯವತಿ ಜಲಾದೆಯವರು ತಿಳಿಸಿದರು. ವಿದ್ಯಾರ್ಥಿಗಳು ಆಸಕ್ತಿಯಿಂದ ಓದಿದರೆ ತಮಗೆ ಬೇಕಾದುದನ್ನು ಸಾಧಿಸಬಹುದು, ಕಷ್ಟಪಟ್ಟು ಓದಿದರೆ ಮುಂದೆ ಹೋಗಿ ವೈದ್ಯರು, ಇಂಜಿನೀಯರ್ಸ್, ವಿಜ್ಞಾನಿಗಳಾಗಿ ಸಮಾಜಕ್ಕೆ ಒಂದು ಒಳ್ಳೆಯ ಸೇವೆ ಮಾಡಬಹುದೆಂದು ಡಾ. ಬಿ.ಆರ್. ಅಂಬೇಡ್ಕರ ಕಾಲೇಜಿನ ಉಪನ್ಯಾಸಕರಾದ ಶ್ರೀ ಮನೋಜಕುಮಾರ ಅವರು ತಮ್ಮ ಹಿತನುಡಿಗಳನ್ನು
ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಶ್ರೀ ಗೋವಿಂದ ಡಿ. ತಾಂದಳೆ ಮಾತನಾಡಿ, ಪ್ರಸಕ್ತ ವರ್ಷ ಕಾಲೇಜಿಗೆ ಶೇ. 99% ರಷ್ಟು ಫಲಿತಾಂಶ ಲಭಿಸಿದೆ, 30 ವಿದ್ಯಾರ್ಥಿಗಳು ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ, ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದು, ಅದರಲ್ಲಿ ನಮ್ಮ ಕಾಲೇಜಿನ 10 ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸಿಗೆ ಉತ್ತಮ ರ್ಯಾಂಕ್ ಪಡೆದು, ಅರ್ಹರಾಗಿದ್ದಾರೆ ಎಂದು ತಿಳಿಸಿದರು. ಪ್ರತಿ ವರ್ಷದಂತೆ ಈ ವರ್ಷ ಕೂಡ ಶೇ. 95% ಕ್ಕಿಂತ ಹೆಚ್ಚು ಅಂಕ ಪಡೆದಂತಹ ವಿದ್ಯಾರ್ಥಿಗಳಿಗೆ 4 ಲ್ಯಾಪ್‍ಟಾಪ್ ನೀಡಿದ್ದೇವೆ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಲ್ಯಾಪ್‍ಟಾಪ್ ತೆಗೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಕಾಲೇಜಿಗೆ ಹಾಗೂ ಬೀದರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ, ಪಿ.ಯು.ಸಿ. ಎರಡು ವರ್ಷ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತಾದ ಹಂತ ಇಲ್ಲಿ ಕಷ್ಟಪಟ್ಟು ಓದಿದ್ದು, ತನ್ನ ಜೀವನವನ್ನು ರೂಪಿಸಬಹುದೆಂದು ಹೇಳಿದರು.
ಪಿ.ಯು.ಸಿ., ನೀಟ್, ಎನ್.ಐ.ಟಿ., ಐ.ಐ.ಟಿ., ಸಿ.ಇ.ಟಿ. ಪರೀಕ್ಷೆಗಳಲ್ಲಿ ಯಾವ ರೀತಿ ಸಿದ್ಧತೆ ಮಾಡಬೇಕೆಂದು ತಿಳಿಸಿದರು.
ಎಸ್.ವಿ.ಇ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ಶ್ರೀನಿವಾಸ ಡಿ. ತಾಂದಳೆ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರೇರೆಪಿಸಿದರು, ಕಾಲೇಜಿನ ಎಲ್ಲಾ ಉಪನ್ಯಾಸಕರು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದರು ಹಾಗೂ ಜಿ. ಅನೀಲಕುಮಾರ ಜೀವಶಾಸ್ತ್ರ ಉಪನ್ಯಾಸಕರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ವಂದನಾರ್ಪಣೆಯನ್ನು ರಸಾಯನಶಾಸ್ತ್ರ ಉಪನ್ಯಾಸಕರಾದ ಕು. ಪ್ರಾಜಕ್ತಾ ಇವರು ವಂದಿಸಿದರು.