ನೀಟ್ ವಿವಾದ ಎನ್‌ಟಿಎಗೆ ಸುಪ್ರೀಂ ನೋಟಿಸ್

ನವದೆಹಲಿ,ಜೂ.೧೮:ನೀಟ್ ಪರೀಕ್ಷೆಯ ವಿವಾದದ ನಡುವೆಯೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಗೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದ್ದು, ಪರೀಕ್ಷಾ ಪ್ರಕ್ರಿಯೆಯಲ್ಲಿ ಶೇ. ೦.೦೦೧ರಷ್ಟು ನಿರ್ಲಕ್ಷ್ಯವನ್ನೂ ಸಹ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕೆಂದು ನ್ಯಾಯಾಲಯ ಎನ್‌ಟಿಎಗೆ ನೋಟಿಸ್ ನೀಡಿದೆ..
ನೀಟ್ ಪರೀಕ್ಷಾ ಹಗರಣಗಳಿಗೆ ಸಂಬಂಧಿಸಿದ ಹಲವಾರು ದೂರುಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪರೀಕ್ಷಾ ಪ್ರಕ್ರಿಯೆ ತನ್ನ ಸಮಗ್ರತೆ ಸಾಮರ್ಥ್ಯ ಕಾಪಾಡಿಕೊಳ್ಳುವ ಮೂಲಕ ಎಲ್ಲ ಅಭ್ಯರ್ಥಿಗಳನ್ನು ಸಮಾನವಾಗಿ ಪರಿಗಣಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಪರೀಕ್ಷಾ ಸಂಸ್ಥೆಯ ಅತ್ಯಂತ ಜವಾಬ್ದಾರಿಯುತ ಕೆಲಸ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಅರ್ಜಿದಾರರಲ್ಲಿ ಶಿಕ್ಷಣತಜ್ಞ ನಿತಿನ್‌ವಿಜಯ್ ಸೇರಿದಂತೆ ನೀಟಿ ಪ್ರತೀಕೆಯನ್ನು ರದ್ದುಪಡಿಸುವ ಬೇಡಿಕೆಗಳು ಸೇರಿ ಮತ್ತೊಂದು ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಿದೆ.
ನೀಟ್ ವಿವಾದಗಳನ್ನುಗಂಭಿರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ನೋಟಿಸ್ ನೀಡಿ ಪರೀಕ್ಷೆಯಲ್ಲಿ ೦.೦೦೧ನಿರ್ಲಕ್ಷ್ಯವಿದ್ದರೂ ಅದನ್ನು ಸರಿಪಡಿಸಬೇಕಾದ ಹಾಗೂ ವಿಚಾರಣೆ ನಡೆಸಬೇಕಾದ ಅಗತ್ಯತೆಯನ್ನು ಸುಪ್ರೀಂಕೋರ್ಟ್ ಒತ್ತಿ ಹೇಳಿದೆ.
ಪರೀಕ್ಷೆ ತಯಾರಿಯಲ್ಲಿ ವಿದ್ಯಾರ್ಥಿಗಳ ಪ್ರಯತ್ನವನ್ನು ಸೂಕ್ಷ್ಮವಾಗಿ ಪರಿಗಣಿಸಿರುವ ನ್ಯಾಯಾಲಯ, ಜು. ೮ ರಂದು ಸಮಗ್ರ ವಿಚಾರಣೆಗಾಗಿ ಇಂದಿನ ಅರ್ಜಿಗಳೊಂದಿಗೆ ಇಂದು ಸಲ್ಲಿಸಿರುವ ೨ ಹೊಸ ಅರ್ಜಿಗಳನ್ನೂ ಸಹ ಸೇರ್ಪಡೆ ಮಾಡಿದೆ.
ನ್ಯಾಯಮೂರ್ತಿಗಳಾದ ವಿಕ್ರಂನಾಥ್ ಮತ್ತು ಎನ್‌ವಿ ಭಟ್ಟಿ ಅವರನ್ನೊಳಗೊಂಡ ಪೀಠ ಇಂದು ನೀಟ್ ವಿವಾದ ಕುರಿತಂತೆ ವಿಚಾರಣೆ ನಡೆಸಿತು.
ಸುಮಾರು ೨೦ ಸಾವಿರ ವಿದ್ಯಾರ್ಥಿಗಳನ್ನು ಪ್ರತಿನಿಧಿಸಿರುವ ನಿತಿನ್‌ವಿಜಯ್ ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ನ್ಯಾಯಾಲಯ ಆರೋಪಿಸಿ ಡಿಜಿಟಲ್ ಪ್ರತಿಭಟನೆಗಳನ್ನು ನ್ಯಾಯಾಲಯದ ಮುಂದೆ ಎತ್ತಿ ಹಿಡಿದಿದ್ದಾರೆ.
ಕೃಪಾಂಕರ ಅಂಕದ ಆಪಾದನೆಗೊಳಗಾಗಿರುವ ಪೇಪರ್‌ಗಳಲ್ಲಿ ಮತ್ತು ಕೃಪಾಂಕರವಿಲ್ಲದ ಅಂಕವಿಲ್ಲದ ಪತ್ರಿಕೆಗಳಲ್ಲಿನ ಅಂಕದ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಮರು ಪರೀಕ್ಷೆಗಾಗಿ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ವಿದ್ಯಾರ್ಥಿಗಳ ದೂರುಗಳನ್ನು ನಿರ್ಲಕ್ಷಿಸದಂತೆ ಮತ್ತು ಪರೀಕ್ಷೆಯ ಸಂದರ್ಭದಲ್ಲಿ ಯಾವುದೇ ದೋಷಗಳನ್ನು ತ್ವರಿತವಾಗಿ ಸರಿಪಡಿಸುವಂತೆ ಸುಪ್ರೀಂಕೋರ್ಟ್ ಪರೀಕ್ಷಾ ಪ್ರಾಧಿಕಾರಕ್ಕೆ ಕಟ್ಟುನಿಟ್ಟಾಗಿ ಆದೇಶಿಸಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಎನ್‌ಟಿಎಗೆ ನೋಟಿಸ್ ಜಾರಿಗೊಳಿಸಿತು. ಆದರೆ, ಕೌನ್ಸಿಲ್ ಪ್ರಕ್ರಿಯೆ ನಿಲ್ಲಿಸಲು ನಿರಾಕರಿಸಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಮತ್ತು ಅರ್ಜಿದಾರರು ಸುಪ್ರೀಂ ನಿಲುವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.
ನೀಟ್ ವಿವಾದಕ್ಕೆ ಸಂಬಂಧಿಸಿದಂತೆ ಆಮ್ ಅದ್ಮಿ ಪಕ್ಷ ಜಂತರ್-ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ. ನಾಳೆ ಮೋದಿ ಸರ್ಕಾರವನ್ನು ಗುರಿಯಾಗಿರಿಸಿಕೊಂಡು ಎಎಪಿ ಸಂಸದರು, ಶಾಸಕರು ಕೌನ್ಸಿಲರ್‌ಗಳು, ಜಂತರ್-ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಉಳಿದಂತೆ ರಾಜಸ್ತಾನ್ ಹೈಕೋರ್ಟ್ ಸಹ ಇಂದು ನೀಟ್ ಸಂಬಂಧಿತ ಅರ್ಜಿ ವಿಚಾರಣೆ ನಡೆಸಲಿದೆ. ಅಭ್ಯರ್ಥಿ ತನುಜಾ ಯಾಧವ್ ತಮ್ಮ ಪರೀಕ್ಷೆ ಪತ್ರಿಕೆಯನ್ನು ೩೦ ನಿಮಿಷ ತಡವಾಗಿ ಸ್ವೀಕರಿಸಿದ್ದರು. ಉಳಿದ ಸಮಯದಲ್ಲಿ ಉತ್ತರವನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅವರಿಗೆ ಗ್ರೇಸ್ ಅಂಕಗಳನ್ನು ನೀಡಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿಗ್ರೇಸ್ ಅಂಕಗಳನ್ನು ನೀಡುವಂತೆ ಸುಪ್ರೀಂ ಮೆಟ್ಟಿಲೇರಿದ್ದರು.