ಬೀದರ:ಜೂ.18:ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವ ಪ್ರಯುಕ್ತ ಪ್ರತಿಷ್ಟಿತ ಬೆಂಗಳೂರಿನ ನಾರಾಯಣ ಹೃದಾಲಯದ ಪ್ರಾಯೋಜಕತ್ವದಲ್ಲಿ ಬೀದರಿನ ಶಾಹೀನ್ ಶಿಕ್ಷಣ ಸಂಸ್ಥೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಕಲ್ಯಾಣ ಕರ್ನಾಟಕದ ಗ್ರಾಮಿಣ ಭಾಗದ ಪ್ರತಿಭಾನ್ವಿತ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅತ್ತುತ್ಯಮ ಶಿಕ್ಷಣ ಒದಗಿಸಿ ವೈದ್ಯರನ್ನಾಗಿಸುವ ಸದುದ್ದೇಶದಿಂದ
ನೀಟ್ ಪರಿಕ್ಷೆಯಲ್ಲಿ 350 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೆÇ್ರತ್ಸಾಹಿಸುವ ನಿಟ್ಟಿನಲ್ಲಿ ದಿನಾಂಕ 2 ಜುಲೈ 2023 ರಂದು ರವಿವಾರ ಬೆಳಿಗ್ಗೆ 11.30 ಗಂಟೆಗೆ ಬೀದರಿನ ಶಾಹೀನ್ ಕಾಲೇಜಿನಲ್ಲಿ (ಶಾಹೀನ್ ನಗರ ಶಹಾಪೂರ ಗೇಟ್ ಹತ್ತಿರ ) ಸಂದರ್ಶನ ಹಾಗೂ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನಶೆಟ್ಟಿ ಅವರು ತಿಳಿಸಿದ್ದಾರೆ
ವಿಶೇಷವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತಿ ಇರುವ ಮತ್ತು 2024 ರ ಪೂರ್ವಭಾವಿಯಾಗಿ ನೀಟ್ ಪರೀಕ್ಷೆ (ನೀಟ್ ರಿಪಿಟರ್ಸ್ ) ಮತ್ತೊಮ್ಮೆ ಬರೆಯಲು ಇಚ್ಛಿಸುವ ಆಸಕ್ತ 75 ಬಡ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ಪ್ರತಿವರ್ಷ ಈಗಾಗಲೆ ನೂರಾರು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಸೇರುವಂತೆ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಬೀದರಿನ ಖ್ಯಾತ ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಅಬ್ದುಲ್ ಖದೀರ ಅವರು ಮತ್ತು ನಾರಾಯಣ ಹೃದಯಾಲಯ ಬೆಂಗಳೂರು ಅವರು ಒಪ್ಪಿರುತ್ತಾರೆ ದಯವಿಟ್ಟು ಆಸಕ್ತ ವಿದ್ಯಾರ್ಥಿಗಳು ಇದೆ 2023 ರ ಜೂನ 28 ರ ಒಳಗಾಗಿ ತಮ್ಮ ಇತ್ತಿಚ್ಚಿನ 3 ಭಾವಚಿತ್ರಗಳೊಂದಿಗೆ ಆದಾಯ -ಜಾತಿ ಪ್ರಮಾಣ ಪತ್ರ ಹತ್ತನೆ ಹಾಗೂ ನೀಟ್ ದೃಢೀಕೃತ ಅಂಕ ಪಟ್ಟಿಗಳೊಂದಿಗೆ ತಮ್ಮ ಹೆಸರು ನೊಂದಾಯಿಸಲು ಮನವಿ ಈ ಕೆಳಗಿನ ದೂರವಾಣಿ ಅಥವಾ ಈ ಲಿಂಕ್ ಮೂಲಕ ಹೆಸರನ್ನ ನೊಂದಾಯಿಸಿ ಮತ್ತು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ವಿನಂತಿ
ವಿಶೇಷ ಸೂಚನೆ
ಕಲ್ಯಾಣ ಕರ್ನಾಟಕದ ಬೇರೆ ಬೇರೆ ಜಿಲ್ಲೆಯಿಂದ ಭಾಗವಹಿಸುವ ವಿದ್ಯಾರ್ಥಿಗಳ ಜೊತೆ ಅವರ ಒಬ್ಬ ಪೆÇೀಷಕರಿಗೂ ಊಟ, ವಸತಿ ಪ್ರಯಾಣ ಭತ್ತೆ ಜೊತೆಗೆ ಬೀದರ ನಗರದ ಐತಿಹಾಸಿಕ ಸ್ಥಳಗಳ ವೀಕ್ಷೆಣೆಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗುವುದು ಹೆಚ್ಚಿನ ಮಾಹಿತಿಗಾಗಿ ಸುರೇಶ ಚನಶೆಟ್ಟಿ (9986792323)ಅಧ್ಯಕ್ಷರು ಜಿಲ್ಲಾ ಕಸಾಪ ಬೀದರ ಹಾಗೂ ಶಿವಶಂಕರ ಟೋಕರೆ (9341652131) ಸಂಯೋಜಕರು, ಶಾಹೀನ್ ಕಚೇರಿ: 180012116235 ಇವರನ್ನು ಸಂಪರ್ಕಿಸಬಹುದು