(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.16: ನೀಟ್ ಪರೀಕ್ಷೆಯ ಫಲಿತಾಂಶದಲ್ಲಿ ನಗರದ ವಶಿಷ್ಟ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಎಂ ಅಭಿಷೇಕ್ 665 ಅಂಕಗಳನ್ನು ಪಡೆದು ಬಳ್ಳಾರಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ ಇನ್ನಿತರೆ ವಿದ್ಯಾರ್ಥಿಗಳಾದ ಯು ರಶ್ಮೀ -643,
ಮಾನಸ್ ಸಿ-637 ವರ್ಷಾ ವಿ ಇಜಾರಿ -629, ಮನೋಜ ಕುಮಾರ ಎಸ್ -627,
ಕ್ಯಾಟಗರಿ ಱ್ಯಾಂಕ್‍ನಲ್ಲಿ
ಮಾನಸ್ ಸಿ-246 ಱ್ಯಾಂಕ್ ಪಡೆದು ಬಳ್ಳಾರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮನೋಜ ಕುಮಾರ ಎಸ್ -326 ಱ್ಯಾಂಕ್ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ
ಹರ್ಷಾ ಕೆ ವಿ -534, ಗೀತಿಕಾ ಕಂದೂಲಾ-546, ತೇಜಸ್ವಿ ಮಹಾರಾಜ್-722, ವಾಲ್ಮೀಕಿ ವಿಷ್ಣು -767, ಒಟ್ಟು 6 ವಿದ್ಯಾರ್ಥಿಗಳು 1000ರ ಒಳಗೆ ಱ್ಯಾಂಕ್ ಗಳನ್ನು ಪಡೆದಿದ್ದಾರೆ.
ಇನ್ನು ಅನೇಕ ವಿದ್ಯಾರ್ಥಿಗಳು ಅತಿಹೆಚ್ಚು ಅಂಕಗಳನ್ನು ಪಡೆದಿದ್ದು ಅವರಲ್ಲಿ ಮಹ್ಮದ್ ಹಾಜಿ – 586 ಅಂಕ, ಮಂದಾರಾ ಡಿ ಇ – 585 ಅಂಕ, ನಿವೇದಿತಾ ಹೆಚ್ – 585 ಅಂಕ, ಹೊನ್ನಲಾ ಸುನೈನಾ – 564 ಅಂಕ, ಶೇಖ್ ಸಮೀನಾ ಕೌಶರ್ – 559 ಅಂಕ, ವಿ ವೈಷ್ಣವಿ – 556 ಅಂಕ ಮತ್ತು ಹೆಚ್ ಎಂ ಸ್ನೆಹಾ – 554 ಅಂಕಗಳನ್ನು ಪಡೆದು ಕಾಲೇಜಿನ ಕೀರ್ತಿಯನ್ನು ಬೆಳಗಿದ್ದಾರೆ.
ಈ ಅತ್ತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲ ಕೆ ರಮೇಶ ರೆಡ್ಡಿಯವರು ವಿದ್ಯಾರ್ಥಿಗಳನ್ನು ಶ್ಲಾಘಿಸಿದ್ದಾರೆ.